ವಯನಾಡ್ : ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ನಿನ್ನೆಯಿಂದ ಎರಡು ದಿನ ವಯನಾಡ್ ಕ್ಷೇತ್ರದಾದ್ಯಂತ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದರು.
Wayanad bypoll: ಇಂದಿನಿಂದ 2 ದಿನ ವಯನಾಡ್‌ನಲ್ಲಿ ಪ್ರಿಯಾಂಕಾ ಪ್ರಚಾರ
0
ಅಕ್ಟೋಬರ್ 29, 2024
Tags
ವಯನಾಡ್ : ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ನಿನ್ನೆಯಿಂದ ಎರಡು ದಿನ ವಯನಾಡ್ ಕ್ಷೇತ್ರದಾದ್ಯಂತ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದರು.
ಪ್ರಿಯಾಂಕಾ ಅವರ ಪ್ರಚಾರವು ನೀಲಗಿರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇಂದಿನಿಂದ ಪ್ರಾರಂಭವಾಗಲಿದ್ದು, ಬೆಳಿಗ್ಗೆ 11.20ರ ಸುಮಾರಿಗೆ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
'ಅವರ ಮೊದಲ ಸಾರ್ವಜನಿಕ ಸಭೆ ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರದ ಮೀನಂಗಡಿಯಲ್ಲಿ ನಡೆಯಲಿದ್ದು, ನಂತರ ಮಧ್ಯಾಹ್ನ 2.30ಕ್ಕೆ ಮಾನಂದವಾಡಿ ವಿಧಾನಸಭಾ ಕ್ಷೇತ್ರದ ಪನಮರಮ್‌ನಲ್ಲಿ ನಡೆಯಲಿದೆ. ಸಂಜೆ 4.30ಕ್ಕೆ ಕಲ್ಪೆಟ್ಟಾ ವಿಧಾನಸಭಾ ಕ್ಷೇತ್ರದ ಪೊಝುತಾನದಲ್ಲಿ ಸಭೆ ನಡೆಸುವ ಮೂಲಕ ಅವರು ತಮ್ಮ ದಿನವನ್ನು ಮುಕ್ತಾಯಗೊಳಿಸಲಿದ್ದಾರೆ' ಎಂದು ಮಾಹಿತಿ ನೀಡಿದರು.
ಮಂಗಳವಾರ ತಿರುವಂಬಾಡಿ, ಎಂಗಪುಳ, ಏರನಾಡ್ , ತೇರಟ್ಟಮ್ಮಾಳ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಸೇರಿದಂತೆ ಇತರ ಪ್ರಮುಖ ನಾಯಕರು ಪ್ರಿಯಾಂಕ ಅವರಿಗೆ ಸಾಥ್ ನೀಡಲಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13ಕ್ಕೆ ಉಪಚುನಾವಣೆ ನಡೆಯಲಿದೆ. ನ.23ಕ್ಕೆ ಮತ ಎಣಿಕೆ ನಡೆಯಲಿದೆ.