ಅಮೆರಿಕಾ: ಹೆಸರಾಂತ ವಿಮಾನ, ರಾಕೆಟ್ ತಯಾರಿಕಾ ಸಂಸ್ಥೆಯಾಗಿರುವ ಬೋಯಿಂಗ್, ಇದೀಗ ತನ್ನ ಕಂಪೆನಿಯಿಂದ ಶೇ.10ರಷ್ಟು ಉದ್ಯೋಗಿಗಳನ್ನು ಕರ್ತವ್ಯದಿಂದ ವಜಾಗೊಳಿಸಲು ಮುಂದಾಗಿದೆ. ಈ ಕಠಿಣ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಬುಧವಾರದಿಂದಲೇ (ನ.13) ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ (ವಜಾಗೊಳಿಸುವ ಕುರಿತಾದ ಪತ್ರ) ಕಳಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸಂಸ್ಥೆ (Boeing) ಮಾಹಿತಿ ಹಂಚಿಕೊಂಡಿದೆ.
ಸಂಸ್ಥೆಯ ದಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಸೂಕ್ಷ್ಮ ಸಮತೋಲನ ಮತ್ತು ಉತ್ಪಾದನೆಯನ್ನು ಮತ್ತೆ ಹೆಚ್ಚಿಸಲು ಸಹಾಯ ಮಾಡಲು ನುರಿತ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ತಮ್ಮ ನಿರ್ಧಾರದ ಹಿಂದಿರುವ ಉದ್ದೇಶ ಎಂದು ಸಂಸ್ಥೆ ಹೇಳಿಕೊಂಡಿದೆ. ಕಳೆದ ತಿಂಗಳು ಕಂಪನಿಯಲ್ಲಿದ್ದ ಹಲವು ಹುದ್ಧೆಗಳಲ್ಲಿ 10% ಕಡಿತವನ್ನು ಘೋಷಿಸಿದ್ದು, ಸುಮಾರು 17,000 ಉದ್ಯೋಗಿಗಳಿಗೆ ಗೇಟ್ಪಾಸ್ ಕೊಡುವುದಾಗಿ ಉಲ್ಲೇಖಿಸಿದೆ. ಈ ಕ್ರಮವು ಬೋಯಿಂಗ್‌ನ ಸ್ಪರ್ಧಾತ್ಮಕ ಅಂಚನ್ನು ಮರುಸ್ಥಾಪಿಸುವ ಮಹತ್ವದ ಗುರಿಯನ್ನು ಹೊಂದಿದೆ ಎನ್ನಲಾಗಿದೆ.
ಪ್ರಸ್ತುತ ಹಲವು ಬಿಕ್ಕಟ್ಟುಗಳಿಂದ ತತ್ತರಿಸಿರುವ ಬೋಯಿಂಗ್ ಸಂಸ್ಥೆ, ಈ ವರ್ಷದ ಆರಂಭದಲ್ಲಿ ಸಂಭವಿಸಿದ ಅಪಘಾತದ ನಂತರ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಇದರೊಟ್ಟಿಗೆ ಹೆಚ್ಚಿನ ಉತ್ಪಾದನೆಯಲ್ಲಿ ಎದುರಿಸಿದ ಸ್ಥಗಿತ ಏಳು ವಾರಗಳವರೆಗೆ ಮುಂದುವರೆದಿದ್ದನ್ನು ಗಮನಿಸಿದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಸಂಸ್ಥೆ ಕೈಗೊಂಡಿರುವುದಾಗಿ ವರದಿ ಉಲ್ಲೇಖಿಸಿದೆ.
ಪ್ರತಿಸ್ಪರ್ಧಿ ಸಂಸ್ಥೆಗಳಲ್ಲಿ ಅವಕಾಶ
ಸ್ಪೇಸ್ ಎಕ್ಸ್ (SpaceX), ಬ್ಲ್ಯೂ ಓರಿಜಿನ್ ಎಲ್ಎಲ್ಸಿ (Blue Origin LLC) ಮತ್ತು ಅಮೆಜಾನ್ನಂತಹ ಸಂಸ್ಥೆಗಳು ಅಮೆರಿಕಾದ ಸೀಟಲ್ನಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಪ್ರತಿಸ್ಪರ್ಧಿಗಳು. ಈ ಕಂಪೆನಿಗಳಲ್ಲಿ ಹೊಸ ನೇಮಕಾತಿಗಳಿಗೆ ಅವಕಾಶಗಳು ಹೆಚ್ಚಿದ್ದು, ಬೋಯಿಂಗ್ನಿಂದ ಹೊರಬಿದ್ದ ಉದ್ಯೋಗಿಗಳು ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದಾಗಿದೆ. ಬೋಯಿಂಗ್ ಹೆಚ್ಚಿನ ವಾಣಿಜ್ಯ ವಿಮಾನಗಳನ್ನು ತಯಾರಿಸುತ್ತದೆ ಎಂದು ಬಾಹ್ಯಾಕಾಶ ಉದ್ಯಮ ವಿಶ್ಲೇಷಕ ಮತ್ತು ಸಲಹೆಗಾರರಾದ ಸ್ಟಾನ್ ಶುಲ್ ಅಭಿಪ್ರಾಯಿಸಿದ್ದಾರೆ.
'ಅಲಯನ್ಸ್ ವೆಲಾಸಿಟಿ ಎಲ್ಎಲ್ಸಿ, ಎಲೋನ್ ಮಸ್ಕ್ ಅವರ ಬಾಹ್ಯಾಕಾಶದ ಸ್ಟಾರ್‌ಲಿಂಕ್ ಉಪಗ್ರಹಗಳಲ್ಲಿ ಕೆಲಸ ಮಾಡುವುದರಿಂದ ಹಿಡಿದು ಅಮೆಜಾನ್ ಮಾಲೀಕ ಜೆಫ್ ಬೆಜೋಸ್ ಅವರ ಸಂಸ್ಥೆಗಳಲ್ಲಿ ರಾಕೆಟ್‌ಗಳು, ಚಂದ್ರನ ಲ್ಯಾಂಡರ್‌ಗಳು ಮತ್ತು ಮುಂತಾದವುಗಳಿಗೆ ಸಹಾಯ ಮಾಡುವವರಿಗೆ ಇಲ್ಲಿ ಉತ್ತಮವಾದ ಅವಕಾಶವಿದೆ. ಅಲ್ಲಿ ಕೆಲಸ ಕಳೆದುಕೊಂಡವರು, ಬೋಯಿಂಗ್ ಪ್ರತಿಸ್ಪರ್ಧಿ ಕಂಪೆನಿಗಳಲ್ಲಿ ಉದ್ಯೋಗ ಪಡೆಯಬಹುದು' ಎಂದು ಸ್ಟಾನ್ ಶುಲ್ ಸಲಹೆ ನೀಡಿದ್ದಾರೆ.
ಬೇಡಿಕೆ ಇದೆ
'ಪುಗೆಟ್ ಸೌಂಡ್ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಬಾಹ್ಯಾಕಾಶ ಕಂಪೆನಿಗಳಲ್ಲಿ ಸುಮಾರು 1,350ಕ್ಕೂ ಅಧಿಕ ಉದ್ಯೋಗಾವಕಾಶಗಳಿವೆ. ಎಲ್ಲಾ ಪಟ್ಟೆಗಳ ಎಂಜಿನಿಯರ್‌ಗಳಿಗೆ ಬೇಡಿಕೆಯಿದೆ. ಯಂತ್ರಶಾಸ್ತ್ರಜ್ಞರು, ಆಡಳಿತಾತ್ಮಕ ಸಹಾಯ, ಮಾರಾಟ ಮತ್ತು ಮಾರುಕಟ್ಟೆ ಸಿಬ್ಬಂದಿ ಮತ್ತು ಇತರ ಹುದ್ದೆಗಳಿಗೆ ಉದ್ಯೋಗಿಗಳನ್ನು ಇಂತಹ ಹಲವು ಸಂಸ್ಥೆಗಳು ಹುಡುಕುತ್ತಿವೆ. ಹೀಗಾಗಿ ಕಾರ್ಮಿಕರಿಗೆ ಬೇಡಿಕೆ ಇದೆ' ಎಂದು ಶುಲ್ ಒತ್ತಿ ಹೇಳಿದ್ದಾರೆ,