ನ
ವದೆಹಲಿ: ನವದೆಹಲಿಯಲ್ಲಿ ತಾಪಮಾನ ಕುಸಿತ ಮುಂದುವರಿದಿದೆ. ಗುರುವಾರ ಕೇವಲ 10.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಈ ಋತುವಿನಲ್ಲಿ ದೆಹಲಿಯಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬುಧವಾರ ರಾತ್ರಿ ತಾಪಮಾನವು 11.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಮಂಗಳವಾರ 12.3ರಷ್ಟಿತ್ತು. ಇವು ಈ ಋತುವಿನಲ್ಲಿ ದಾಖಲಾಗಿರುವ ಎರಡು ಮತ್ತು ಮೂರನೇ ಕನಿಷ್ಠ ತಾಪಮಾನ ಎಂದು ಇಲಾಖೆ ಮಾಹಿತಿ ನೀಡಿದೆ.