HEALTH TIPS

10 ದಿನಗಳ ಶ್ರೀ ಪದ್ಮನಾಭಸ್ವಾಮಿ ಅಲಪಸ್ಸಿ ಉತ್ಸವ ಮುಕ್ತಾಯ

ತಿರುವನಂತಪುರಂ: ಐತಿಹಾಸಿಕ ಪದ್ಮನಾಭಸ್ವಾಮಿ ದೇಗುಲದ ಅಲಪಸ್ಸಿ ಮಹೋತ್ಸವದ ಧ್ವಜಾವರೋಹಣ ಇಂದು ನಡೆಯಲಿದೆ. ಈ ಹಬ್ಬವು ತುಲಾ ಮಾಸದ ಅಷ್ಟಮಿ ನಕ್ಷತ್ರದಂದು ಪ್ರಾರಂಭವಾಗಿ ಇಂದು ಆರಾಟ್ ನೊಂದಿಗೆ ಕೊನೆಗೊಳ್ಳುತ್ತದೆ.

ಸಂಜೆ ಶಂಖುಮುಖದಲ್ಲಿ ನಡೆದ ಆರಾಟ್ ನೊಂದಿಗೆ  ಉತ್ಸವ ಮುಕ್ತಾಯವಾಯಿತು. ಸಂಜೆ 4.30ಕ್ಕೆ ಆರಾಟ್ ಮೆರವಣಿಗೆ ಆರಂಭವಾಯಿತು. 

ಕಳೆದ ತಿಂಗಳು 31ರಂದು ಧ್ವಜಾರೋಹಣ ನೆರವೇರಿಸಿದ ಅಲ್ಪಸ್ಸಿಹಬ್ಬದ ನಿಮಿತ್ತ ಇಂದು ಧ್ವಜಾವರೋಹಣ ಮಾಡಲಾಗುತ್ತಿದೆ. 10 ದಿನಗಳ ಕಾಲ ನಡೆದ  ಆಚರಣೆಗಳು ಆರಾಟ್ ಉತ್ಸವದೊಂದಿಗೆ ಮುಕ್ತಾಯಗೊಳ್ಳಲಿವೆ. ದೇಗುಲದಲ್ಲಿ ದೀಪಕ್ಕೆ ಪೂಜೆ ಸಲ್ಲಿಸಿದ ನಂತರ ಗರುಡವಾಹನದ ಮೇಲೆ ಶ್ರೀಪದ್ಮನಾಭಸ್ವಾಮಿ, ನರಸಿಂಹಮೂರ್ತಿ ಮತ್ತು ಶ್ರೀಕೃಷ್ಣ ಸ್ವಾಮಿಯನ್ನು ಹೊರತರುವುದರೊಂದಿಗೆ ಮೆರವಣಿಗೆ ಆರಂಭವಾಯಿತು. 

ತಿರುವಳ್ಳಂ ಪರಶುರಾಮ ದೇವಸ್ಥಾನ, ವಡುವೋತ್ ಮಹಾವಿಷ್ಣು ದೇವಸ್ಥಾನ, ಅರಕಾಟ್ ದೇವಿ ದೇವಸ್ಥಾನ ಮತ್ತು ಪಾಲ್ಕುಲಂಗರ ಚೇರಿ ಉದೇಶ್ವರಂ ಮಹಾವಿಷ್ಣು ದೇವಸ್ಥಾನದಿಂದ ಆರು ವಿಗ್ರಹಗಳು ಆಗಮಿಸಿ ಮೆರವಣಿಗೆಯು ವಲ್ಲಕಡವ್ ಮೂಲಕ ವಿಮಾನ ನಿಲ್ದಾಣ ಆವರಣದೊಳಗೆ  ಸಾಗಿ ಶಂಖುಮುಗಂನಲ್ಲಿ ಮುಕ್ತಾಯಗೊಳ್ಳುತ್ತದೆ. 

ತಿರುವಾಂಕೂರಿನ ಸಾಂಸ್ಕøತಿಕ ಪರಂಪರೆಯನ್ನು ಸಾರುವ ಮೆರವಣಿಗೆಯಲ್ಲಿ ಆನೆ, ಅಶ್ವದಳ, ಪೋಲೀಸ್ ಮತ್ತು ಮಿಲಿಟರಿ ಬ್ಯಾಂಡ್‍ಗಳು ಜೊತೆಯಲ್ಲಿರುತ್ತವೆ. ಸಶಸ್ತ್ರ ಪಡೆಗಳಲ್ಲದೆ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರುಗು ನೀಡಲಿವೆ. 9 ಗಂಟೆಗೆ ದೇವಸ್ಥಾನಕ್ಕೆ ಆರಾಟ್ ಘೋಷಯಾತ್ರೆ ಮರಳುವ ಮೂಲಕ ಈ ವರ್ಷದ ಅಲ್ಪಸ್ಸಿ ಉತ್ಸವ ಮುಕ್ತಾಯವಾಗಲಿದೆ. ಮೆರವಣಿಗೆಯ ಅಂಗವಾಗಿ ತಿರುವನಂತಪುರಂ ವಿಮಾನ ನಿಲ್ದಾಣವನ್ನು ಭಾಗಶಃ ಮುಚ್ಚಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries