ಕಾಲ ಬದಲಾದಂತೆ ನಮ್ಮ ಆಹಾರಶೈಲಿಯಲ್ಲಿಯೂ ಬದಲಾವಣೆ ಮಾಡಿಕೊಂಡರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದೀಗ ಚಳಿಗಾಲ, ಕೆಲವು ಕಡೆಯಂತೂ ಕೊರೆಯುವ ಚಳಿ ಇದೆ, ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಗೆ ಕೆಲವೊಂದು ಆಹಾರವನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಯಿಂದ ದೇಹವನ್ನು ರಕ್ಷಣೆ ಮಾಡುತ್ತದೆ, ಆ ಆಹಾರಗಳಾವುವು ಎಂದು ನೋಡೋಣ:
1. ನಿಂಬೆ ರಸ:
ಬೆಳಗ್ಗೆ ಎದ್ದ ಮೇಲೆ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿಯಿರಿ, ಇದರಿಂದ ದೇಹಕ್ಕೆ ವಿಟಮಿನ್ ಸಿ ಸೇರುವುದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.
2.ನೆಲ್ಲಿಕಾಯಿ
ನೆಲ್ಲಿ ಕಾಯಿ ಈ ಸೀಸನ್‌ನಲ್ಲಿ ತುಂಬಾನೇ ದೊರೆಯುತ್ತದೆ. ದಿನಾ ಒಂದು ನೆಲ್ಲಿಕಾಯಿ ತಿಂದರೆ ತುಂಬಾ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಅಲ್ಲದೆ ಕೂದಲು, ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನೆಲ್ಲಿಕಾಯಿ ಉಪ್ಪಿಗೆ ಹಾಕಿದ್ದು ಅಥ^ವಾ ಜ್ಯೂಸ್ ಮಾಡಿ ಕುಡಿಯಬಹುದು, ನೆಲ್ಲಿಕಾಯಿ ಚಟ್ನಿ, ನೆಲ್ಲಿಕಾಯಿ ಪುಡಿ ಹೀಗೆ ನೆಲ್ಲಿಕಾಯಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.
3. ತುಪ್ಪ
ಚಳಿಗಾಲದಲ್ಲಿ ನೀವು ಸೇವಿಸಲೇಬೇಕಾದ ಆಹಾರದಲ್ಲೊಂದು ತುಪ್ಪ, ತುಪ್ಪವನ್ನು ಬ್ರೇಕ್ ಫಾಸ್ಟ್ ಅಥವಾ ಅನ್ನಕ್ಕೆ ಹಾಕಿ ಸವಿಯಿರಿ, ತುಪ್ಪವನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ತ್ವಚೆ ಡ್ರೈಯಾಗುವುದನ್ನು ತಡೆಗಟ್ಟಬಹುದು, ತ್ವಚೆಯಲ್ಲಿ ಮೃದುತ್ವ ಕಾಪಾಡಲು ತುಂಬಾನೇ ಸಹಕಾರಿ.
4. ಸಿಹಿಗೆಣಸು
ಚಳಿಗಾಲದಲ್ಲಿ ತಿನ್ನಲೇಬೇಕಾದ ಆಹಾರದಲ್ಲೊಂದು ಸಿಹಿ ಗೆಣಸು.' ಇದು ಸೀಸನಲ್ ಫುಡ್ ಕೂಡ ಹೌದು, ಇದರಲ್ಲಿರುವ ಪೋಷಕಾಂಶ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಮಕ್ಕಳಿಗೂ ತುಂಬಾನೇ ಒಳ್ಳೆಯದು. ಇದನ್ನು ದಿನಾ ನಿಮ್ಮ ಆಹಾರಕ್ರಮದಲ್ಲಿ ಸೇರಿಸಬಹುದು, ಒಂದು ಚಿಕ್ಕ ತುಂಡು ತಿಂದರೂ ಸಾಕು,ಈ ಸಿಹಿಗೆಣಸು ಮಲಬದ್ಧತೆ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿ.
5. ಸೀಸನಲ್ ಆಹಾರ
ಚಳಿಗಾಲದಲ್ಲಿ ದೊರೆಯುವ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ, ಅವರೆ, ಬಟಾಣಿ ಮತ್ತಿತರ ತರಕಾರಿ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
6. ಬೆಲ್ಲ
ಚಳಿಗಾಲದಲ್ಲಿ ಬೆಲ್ಲದ ಪದಾರ್ಥಗಳನ್ನು ಬಳಸುವುದು ಒಳ್ಳೆಯದು, ಬೆಲ್ಲದ ಕಾಫಿ, ಬೆಲ್ಲ ಹಾಕಿ ಮಾಡುವ ಸಿಹಿ ಪದಾರ್ಥ ಇವೆಲ್ಲಾ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೆಲ್ಲ ಶ್ವಾಸಕೋಶವನ್ನು ಶುದ್ಧ ಮಾಡುತ್ತದೆ, ವಾಯು ಮಾಲಿನ್ಯ ಹೆಚ್ಚಿರುವ ಕಡೆ ವಾಸಿಸುವವರು ಬೆಲ್ಲ ಬಳಸುವುದು ಒಳ್ಳೆಯದು.
7. ಬ್ರೊಕೊಲಿ, ಕ್ಯಾಬೇಜ್, ಹೂಕೋಸು ಈ ಬಗೆಯ ತರಕಾರಿ
ಇವುಗಳನ್ನು ಕೂಡ ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದು ತುಂಬಾನೇ ಒಳ್ಳೆಯದು. ಇವುಗಳಲ್ಲಿ ನಾರಿನಂಶ ಹಾಗೂ ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
8. ಎಳ್ಳು
ಚಳಿಗಾಲದಲ್ಲಿ ಎಳ್ಳು ತಿಂದರೆ ಒಳ್ಳೆಯದು, ಎಳ್ಳು ಮೈಯನ್ನು ಬೆಚ್ಚಗಿಡುವುದು ಅಲ್ಲದೆ ತ್ವಚೆಯ ಆರೋಗ್ಯಕ್ಕೂ ಒಳ್ಳೆಯದು, ಹಾಗಾಗಿ ದಿನಾ ಸ್ವಲ್ಪ ಎಳ್ಳು-ಬೆಲ್ಲ ತಿಂದರೆ ಒಳ್ಳೆಯದು.
9. ಖರ್ಜೂರ
ಚಳಿಗಾಲದಲ್ಲಿ ಖರ್ಜೂರ ತಿಂದರೆ ಒಳ್ಳೆಯದು, ಖರ್ಜೂರ ದೇಹದ ಉಷ್ಣಾಂಶ ಹೆಚ್ಚಿಸುತ್ತದೆ ಅಲ್ಲದೆ ಇದರಲ್ಲಿರುವ ಪೋಷಕಾಂಶ ಆರೋಗ್ಯ ರಕ್ಷಣೆ ಮಾಡಲು ತುಂಬಾನೇ ಸಹಕಾರಿಯಾಗಿದೆ.
10. ನವಣೆ, ಜೋಳ
ನವಣೆ, ಜೋಳ, ರಾಗಿ ಇವುಗಳಲ್ಲಿ ಪೋಷಕಾಂಶ ಅಧಿಕವಿರಲಿದೆ. ಇದು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ, ಅಲ್ಲದೆ ದೇಹದಲ್ಲಿ ರೋಗ ಶಕ್ತಿ ವೃದ್ಧಿಸುತ್ತದೆ, ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯುದು. ನಿದ್ರಾಹೀನತೆ, ಮಾನಸಿಕ ಒತ್ತಡ, ಖಿನ್ನತೆ ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ.