ಐರೋಪ್ಯ ಒಕ್ಕೂಟ (ಇಯು) ಸೇರಿದಂತೆ ಉತ್ತಮ ಸಾಧನೆ ತೋರಿರುವ 63 ದೇಶಗಳ ಪಟ್ಟಿಯನ್ನು 'ಜರ್ಮನ್‌ವಾಚ್', 'ನ್ಯೂ ಕ್ಲೈಮೇಟ್ ಇನ್ಸ್‌ಟಿಟ್ಯೂಟ್' ಹಾಗೂ 'ಕ್ಲೈಮೇಟ್ ಆಯಕ್ಷನ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್' ಪ್ರಕಟಿಸಿವೆ.
ಜಗತ್ತಿನಲ್ಲಿ ಅಧಿಕ ಪ್ರಮಾಣದಲ್ಲಿ ಉಷ್ಣವರ್ಧಕ ಅನಿಲಗಳನ್ನು ಹೊರಸೂಸುವಿಕೆ, ನವೀಕರಿಸಬಹುದಾದ ಇಂಧನಗಳು ಹಾಗೂ ಹವಾಮಾನ ನೀತಿ ವಿಷಯದಲ್ಲಿನ ಪ್ರಗತಿ ಕುರಿತು ಈ ಸಂಸ್ಥೆಗಳು ಪರಿಶೀಲನೆ ನಡೆಸುತ್ತವೆ.
ಸಿಸಿಪಿಐಗೆ ಸಂಬಂಧಿಸಿ, ಭಾರತವು 10ನೇ ಸ್ಥಾನ ಪಡೆದಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಎರಡು ಸ್ಥಾನ ಕುಸಿತ ಕಂಡಿದೆ.