ಕಾಸರಗೋಡು: ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ-2024 ರ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಕಾಸರಗೋಡು ಕನ್ನಡಗ್ರಾಮದಲ್ಲಿ ನ. 10ರಂದು ಆಯೋಜಿಸಲಾಗಿದೆ. ಚಿತ್ರ ರಚನೆ-ಪೆನ್ಸಿಲ್ ಡ್ರಾಯಿಂಗ್ , ರಸಪ್ರಶ್ನೆ, ಏಕಪಾತ್ರಾಭಿನಯ, ಛದ್ಮವೇಷ ಸ್ಪರ್ಧೆ, ಸಣ್ಣಕತೆ, ಕನ್ನಡ ವಾರ್ತಾವಾಚನ ಸ್ಪರ್ಧೆ ನಡೆಯಲಿರುವುದು. ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಪರ್ಧೆ ನಡೆಯುವುದು.
ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಬೆಳಗ್ಗೆ 10ರಿಂದ 11ರ ಒಳಗೆ ನಿರ್ದೇಶಿಸಿದ ನೋಂದಾವಣ ಕೌಂಟರಲ್ಲಿ ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಆಯಾಯ ಸ್ಪರ್ಧೆಗೆ ತಿಳಿಸಿದ ಸಮಯಕ್ಕೆ ಸರಿಯಾಗಿ ತಯಾರಾಗಿ ಇರತಕ್ಕದ್ದು. ಸಮಯ ಮೀರಿ ಬಂದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಂಸನಾ ಪತ್ರವನ್ನು ಸಮಾರೋಪ ಸಮಾರಂಬದಲ್ಲಿ ವಿತರಿಸಲಾಗುವುದು.
ಕುಣಿತ ಭಜನೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಚಿತ್ರ ರಚನೆ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇದ್ದರೆ ಅವರಿಗೆ ಪ್ರತ್ಯೇಕ ಸಮಯ ನೀಡಿ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.