HEALTH TIPS

ಸೆ. 11ರ ಅಮೆರಿಕ ಮೇಲಿನ ದಾಳಿ: ಮರಣದಂಡನೆಗೆ ಗುರಿಯಾಗಿದ್ದ ಅಪರಾಧಿಗಳ ಮನವಿ ಮಾನ್ಯ

          ವಾಷಿಂಗ್ಟನ್‌: ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ 2001ರ ಸೆ. 11ರಂದು ಭಯೋತ್ಪಾದಕರು ನಡೆಸಿದ ದಾಳಿಯ ಸಂಚುಕೋರ ಖಾಲಿದ್ ಶೇಖ್ ಮೊಹಮ್ಮದ್ ಹಾಗೂ ಆತನ ಇಬ್ಬರು ಸಹವರ್ತಿಗಳ ಮನವಿ ಒಪ್ಪಂದಗಳನ್ನು ಸೇನಾ ನ್ಯಾಯಾಧೀಶರು ಮಾನ್ಯ ಮಾಡಿದ್ದು, ಮರಣದಂಡನೆಯ ಶಿಕ್ಷೆಯಿಂದ ಇವರು ಪಾರಾಗುವ ಸಾಧ್ಯತೆಗಳಿವೆ.

       ಈ ಒಪ್ಪಂದದ ಅಂಶಗಳನ್ನು ಬಹಿರಂಗಗೊಳಿಸದಂತೆ ಆದೇಶಿಸಿದ್ದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವರ ಆದೇಶವನ್ನೂ ನ್ಯಾಯಾಧೀಶರು ರದ್ದುಗೊಳಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

           9/11 ಭಯೋತ್ಪಾದಕರ ದಾಳಿಯಲ್ಲಿ ಸುಮಾರು ಮೂರು ಸಾವಿರ ಜನರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಸಂಚುಕೋರ ಖಾಲಿದ್ ಶೇಖ್ ಮೊಹಮ್ಮದ್ ಹಾಗೂ ಆತನ ಇಬ್ಬರು ಸಹವರ್ತಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ದೀರ್ಘಕಾಲದಿಂದ ನಡೆಯುತ್ತಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳ ತಪ್ಪೊಪ್ಪಿಗೆ ಮನವಿಯನ್ನು ಪರಿಗಣಿಸಿ ಮರಣದಂಡನೆಯಿಂದ ವಿನಾಯಿತಿ ನೀಡುವ ಕುರಿತು ಸರ್ಕಾರಿ ವಕೀಲರು ಸೇನಾ ಅಟಾರ್ನಿಗಳೊಂದಿಗೆ ಸಂಧಾನ ಮಾತುಕತೆ ನಡೆಸಿದ್ದರು. ಇದನ್ನು ಕ್ಯೂಬಾದ ಗ್ವಾಂಟನಾಮೊ ಕೊಲ್ಲಿಯಲ್ಲಿರುವ ಮಿಲಿಟರಿ ಆಯೋಗದ ಉನ್ನತ ಅಧಿಕಾರಿಗಳು ಅನುಮೋದಿಸಿದ್ದರು.

          ಈ ಒಪ್ಪಂದ ಹಾಗೂ ಶಿಕ್ಷೆಯ ಪ್ರಮಾಣ ಬದಲಿಸುವ ಪ್ರಯತ್ನಗಳು ಅಮೆರಿಕದ ಪ್ರಾಸಿಕ್ಯೂಷನ್ ಇತಿಹಾಸದಲ್ಲೇ ಅತ್ಯಂತ ಅವಮಾನಕರ ಹಾಗೂ ಕಾನೂನು ಸಂಘರ್ಷವನ್ನು ಸೃಷ್ಟಿಸಿದೆ. ಈ ಮನವಿಯಲ್ಲಿ ಶಿಕ್ಷೆಗೊಳಗಾದವರು ಸಿಐಎ ವಶದಲ್ಲಿರುವಾಗ ವರ್ಷಗಟ್ಟಲೆ ಅನುಭವಿಸಿದ ಚಿತ್ರಹಿಂಸೆಯನ್ನು ವಿವರಿಸಿದ್ದಾರೆ. ಆದರೆ ಈ ಮನವಿ ಕುರಿತು ನಿರ್ಧಾರ ತೆಗೆದುಕೊಳ್ಳಲು ಹಲವು ವರ್ಷಗಳನ್ನೇ ತೆಗೆದುಕೊಂಡಿದೆ.

             ಕಳೆದ ಬೇಸಿಗೆಯಲ್ಲಿ ಈ ಒಪ್ಪಂದ ಬಹಿರಂಗಗೊಂಡಿತ್ತು. ಅಮೆರಿಕದ ನೆಲದಲ್ಲಿ ಈವರೆಗೂ ಸಂಭವಿಸಿರುವ ಘಟನೆಗಳಲ್ಲಿ ಅತ್ಯಂತ ಘೋರವಾದ ಪ್ರಕರಣ ಇದಾಗಿದ್ದರೂ, ಅಪರಾಧಿಗಳಿಗೆ ವಿಧಿಸಿರುವ ಮರಣದಂಡನೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವ ಮಾತುಕತೆಗಳು ಒಂದು ಮಹತ್ವದ ಹೆಜ್ಜೆಯಾಗಿದೆ. ಇದನ್ನು ರಕ್ಷಣಾ ಕಾರ್ಯದರ್ಶಿ ಕಚೇರಿಯೇ ನಿರ್ಧರಿಸಬೇಕು ಎಂದು ಆ ಸಮಯದಲ್ಲಿ ಆಸ್ಟಿನ್ ಹೇಳಿದ್ದರು.

          ಆದರೆ ನ್ಯಾಯಾಧೀಶರ ಈ ನಿರ್ಧಾರ ಕುರಿತು ಪೆಂಟಗನ್‌ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಧ್ಯಮ ಕಾರ್ಯದರ್ಶಿ ಮೇಜರ್ ಜನರಲ್‌ ಪ್ಯಾಟ್‌ ರೈಡರ್‌ ಹೇಳಿದ್ದಾರೆ.

ಆದರೆ ಗ್ವಾಂಟನಾಮೊ ನ್ಯಾಯಾಲಯವು ಹೊರಡಿಸಿರುವ 29 ಪುಟಗಳ ಆದೇಶದಲ್ಲಿ ಮನವಿ ಒಪ್ಪಂದ ವ್ಯವಹಾರಗಳನ್ನು ನಿರ್ಧರಿಸುವ ಅಧಿಕಾರ ಸೇನಾ ನ್ಯಾಯಾಲಯ ಹೊಂದಿಲ್ಲ ಎಂದು ರಕ್ಷಣಾ ಇಲಾಖೆಯ ಬ್ಲಾಗ್‌ನಲ್ಲಿ ಹೇಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries