ನವದೆಹಲಿ: ಪ್ರತಿಕೂಲ ಹವಾಮಾನದ ಕಾರಣ ಸೋಮವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಒಟ್ಟು 11 ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವದೆಹಲಿ: ಪ್ರತಿಕೂಲ ಹವಾಮಾನದ ಕಾರಣ ಸೋಮವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಒಟ್ಟು 11 ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದಲ್ಲಿನ(ದೆಹಲಿ) ಕಡಿಮೆ ಗೋಚರತೆ ಹಲವು ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.
11 ವಿಮಾನಗಳ ಪೈಕಿ 10 ವಿಮಾನಗಳನ್ನು ಜೈಪುರಕ್ಕೆ ಹಾಗೂ ಒಂದು ವಿಮಾನವನ್ನು ಡೆಹರಾಡೂನ್‌ಗೆ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಪೈಲಟ್‌ಗಳು CAT III (ಕಡಿಮೆ ಗೋಚರತೆ) ಕಾರ್ಯಾಚರಣೆ ತರಬೇತಿ ಪಡೆದಿಲ್ಲ. ಹಾಗಾಗಿ ವಿಮಾನಗಳ ಮಾರ್ಗ ಬದಲಿಸಬೇಕಾಯಿತು. CAT III ತರಬೇತಿ ಪಡೆದ ಪೈಲಟ್‌ಗಳಿಗೆ ಕಡಿಮೆ ಗೋಚರತೆಯ ಪರಿಸ್ಥಿತಿಗಳಲ್ಲಿ ವಿಮಾನಗಳನ್ನು ಟೇಕ್ ಆಫ್ ಮಾಡಲು ಹಾಗೂ ಲ್ಯಾಂಡ್ ಮಾಡಲು ಅನುಮತಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
(CAT III ಒಂದು ಸಂಚಾರ ವಿಧಾನವಾಗಿದ್ದು, ದಟ್ಟವಾದ ಮಂಜು ಮತ್ತು ಗೋಚರತೆ ಕಡಿಮೆ ಇರುವಂತಹ ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಮಾನಗಳು ಇಳಿಯಲು ಸಹಾಯ ಮಾಡುತ್ತದೆ).