ಪೆರ್ಲ: ಕುಂಬಳೆ ಉಪ ಜಿಲ್ಲಾ ಮಟ್ಟದ
63ನೇ ಕೇರಳ ಶಾಲಾ ಕಲೋತ್ಸವ ನ.11ರಿಂದ ನ. 20ರವರೆಗೆ ಶೇಣಿ ಶ್ರೀ ಶಾರದಾಂಬಾ ವಿದ್ಯಾ ಸಂಸ್ಥೆಗಳಲ್ಲಿ ವಿವಿಧ ದಿನಗಳಲ್ಲಿ ನಡೆಯಲಿದೆ.
ನ.11ರಂದು ಬೆಳಗ್ಗೆ 9.30ಕ್ಕೆ ಶೇಣಿ . ಶ್ರೀ ಶಾರದಾಂಬಾ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕಿ ಶಾರದಾ ವೈ. ಧ್ವಜಾರೋಹಣ ನೆರವೇರಿಸುವ ಮೂಲಕ ಶಾಲಾ ಕಲೋತ್ಸವಕ್ಕೆ ಚಾಲನೆ ನೀಡು ವರು. ನ.11 ಮತ್ತು 12ರಂದು ವೇದಿಕೇತರ ಸ್ಪರ್ಧೆಗಳು ನಡೆಯಲಿವೆ.
ನ. 18ರಂದು ಮಧ್ಯಾಹ್ನ 2.30ಕ್ಕೆ ಉದ್ಘಾಟನಾ ಕಾಠ್ಯಕ್ರಮ ನಡೆಯಲಿದೆ. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು.
ಉದುಮ ಶಾಸಕ ಸಿ.ಎಚ್. ಕುಂಞಂಬು, ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ಪುತ್ತಿಗೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಆಳ್ವ, ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಶಾಂತ ಬಿ., ಚೆಂಗಳ ಗ್ರಾಪಂ ಅಧ್ಯಕ್ಷ ಖಾದರ್ ಬದ್ರಿಯಾ., ಬೆಳ್ಳೂರು ಗ್ರಾಪಂ ಅಧ್ಯಕ್ಷ ಶ್ರೀಧರ ಎಂ., ಸಿ.ಬಿ.ಐ ಬೆಂಗಳೂರು ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ ಮತ್ತಿತರರು ಉಪಸ್ಥಿತರಿರುವರು.
ಇಂದು ಡಂಗುರ ಮೆರವಣಿಗೆ
ಶೇಣಿ ಶ್ರೀ ಶಾರದಾಂಬಾ ವಿದ್ಯಾಸಂಸ್ಥೆಗಳಲ್ಲಿ ನಡೆಯ ಲಿರುವ ಕುಂಬಳೆ ಉಪ ಜಿಲ್ಲಾ ಮಟ್ಟದ 63ನೇ ಶಾಲಾ ಕಲೋತ್ಸವದ ಸಿದ್ದತೆ ಅಂತಿಮ ಹಂತದಲ್ಲಿವೆ. ಎಣ್ಮಕಜೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯಲಿರುವ ಶಾಲಾ ಕಲೋತ್ಸವವನ್ನು ನಾಡಿನ ಮಹೋತ್ಸವವಾಗಿ ಆಚರಿಸುವ ನಿಟ್ಟಿನಲ್ಲಿ ಕಲೋತ್ಸವದ ಪ್ರಚಾರಾರ್ಥ ಇಂದು( ನ.9) ಮಧ್ಯಾಹ್ನ 2.30ಕ್ಕೆ ಪೆರ್ಲ ಪೇಟೆಯಲ್ಲಿ ಡಂಗುರ ಮೆರವಣಿಗೆ ನಡೆಯಲಿದೆ. ನಾನಾ ಕಲಾ ರೂಪಗಳನ್ನು ಒಳಗೊಂಡ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಜನಪ್ರತಿನಿಧಿಗಳು, ನಾನಾ ಕ್ಷೇತ್ರ ಗಳ ಮುಂದಾಳುಗಳು, ವ್ಯಾಪಾರಿ ಸಂಘಟನೆ, ಸಂಘ ಸಂಸ್ಥೆಗಳ ಪದಾಧಿಕಾರಿ ಗಳು, ಸ್ಥಳೀಯರು ಭಾಗವಹಿಸುವರು.
ನ. 20ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕ್ಕುನ್ನು ಉದ್ಘಾಟಿಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕರ್ನಾಟಕ ಸರಕಾರದ ಕೆಬಿಎಡಿಎ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಂಜೇ ಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಉಪಸ್ಥಿತರಿರುವರು
.