ಆಲಪ್ಪುಳ: ಬಿರಿಯಾನಿ ಚಾಲೆಂಜ್ ಮೂಲಕ ವಯನಾಡ್ ದುರಂತಕ್ಕೆ ಸಂಗ್ರಹಿಸಿದ್ದ ಹಣವನ್ನು ಕಳವುಗೈದ ಪ್ರಕರಣದಲ್ಲಿ 3 ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಖಾ ಕಾರ್ಯದರ್ಶಿ ಸೇರಿದಂತೆ 3 ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಮಾರು 1200 ಬಿರಿಯಾನಿಗಳನ್ನು ಬಡಿಸುವ ಮೂಲಕ ಸಂತ್ರಸ್ತರಿಗೆ ಸಂಗ್ರಹಿಸಲಾದ 1.2 ಲಕ್ಷ ರೂಪಾಯಿಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಎಫ್‍ಐಆರ್ ದಾಖಲಾಗಿದೆ. ಬಿರಿಯಾನಿ ಚಾಲೆಂಜ್ ಜೊತೆಗೆ ದೇಣಿಗೆ ಪಡೆದ ಹಣವನ್ನು ವಂಚನೆ ಮಾಡಿದ್ದಾರೆ ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ.
ಕಾಯಂಕುಳಂ ಪುದುಪಲ್ಲಿ ಮಾಜಿ ಸ್ಥಳೀಯ ಸಮಿತಿ ಸದಸ್ಯ ಸಿ.ಬಿ.ಶಿವರಾಜನ್, ತಟ್ಟೆಕಾಡ್ ಶಾಖೆಯ ಕಾರ್ಯದರ್ಶಿ ಅರುಣ್ ಮತ್ತು ಡಿವೈಎಫ್‍ಐ ಪ್ರಾದೇಶಿಕ ಅಧ್ಯಕ್ಷ ಅಮಲ್ ರಾಜ್ ವಿರುದ್ಧ ಕಾಯಂಕುಳಂ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಯನಾಡ್ ದುರಂತ ಸಂತ್ರಸ್ತರಿಗೆ ಬಿರಿಯಾನಿ ಚಾಲೆಂಜ್ ನ ಸಂಗ್ರಹಗೊಂಡ ಹಣ ದೋಚಲಾಗಿತ್ತು. ಸಂಗ್ರಹವಾದ ಮೊತ್ತವನ್ನು ಅವರು ಇನ್ನೂ ಸರ್ಕಾರಕ್ಕೆ ಹಸ್ತಾಂತರಿಸಿಲ್ಲ.