HEALTH TIPS

ರಾಜಸ್ಥಾನ | ಹಲ್ಲೆ: ಪಕ್ಷೇತರ ಅಭ್ಯರ್ಥಿ 14 ದಿನ ನ್ಯಾಯಾಂಗ ವಶಕ್ಕೆ

        ಜೈಪುರ: ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಕಾರಣ ಬಂಧನಕ್ಕೊಳಗಾಗಿದ್ದ ಪಕ್ಷೇತರ ಅಭ್ಯರ್ಥಿ ನರೇಶ್‌ ಮೀನಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

        ಟೊಂಕ್‌ ಜಿಲ್ಲೆಯ ನಿವಾಯ್‌ನ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲು ಪೊಲೀಸರು ನಿರ್ಧರಿಸಿದ್ದರು.

         ಆದರೆ, ಅವರ ಬೆಂಬಲಿಗರು ನ್ಯಾಯಾಲಯದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜೈಪುರ- ಕೋಟಾ ನಡುವಿನ ಹೆದ್ದಾರಿಯನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಒಡ್ಡಿದ್ದರು.

             ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತಕ್ಷಣವೇ ಯೋಜನೆ ಬದಲಾಯಿಸಿದ್ದ ಪೊಲೀಸರು, ವರ್ಚುವಲ್ ಆಗಿ ಶಾಸಕರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

          ದೆವಲಿ ಉನಿಯಾರಾ ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ ಮತದಾನ ನಿಗದಿಯಾಗಿತ್ತು.

ಸಮರ್‌ವಾತಾ ಗ್ರಾಮದಲ್ಲಿ ಮೂವರು ನಕಲಿ ಮತದಾನ ನಡೆಸುತ್ತಿದ್ದಾರೆ ಅಭ್ಯರ್ಥಿ ನರೇಶ್‌ ಮೀನಾ ಎಂದು ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ ಅಮಿತ್‌ ಚೌಧರಿಗೆ ದೂರು ನೀಡಿದ್ದರು. ಆದರೂ ಮತದಾನ ತಡೆಯುವಲ್ಲಿ ಅಧಿಕಾರಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ಅಧಿಕಾರಿಯ ಕೊರಳಪಟ್ಟಿ ಹಿಡಿದು, ಹಲ್ಲೆ ನಡೆಸಿದ್ದರು.

          ಶಾಸಕರ ವಿರುದ್ಧ ಸಾರ್ವಜನಿಕರ ಕೆಲಸಗಳಿಗೆ ತೊಂದರೆ, ಆಸ್ತಿಪಾಸ್ತಿ ನಷ್ಟ ಸೇರಿದಂತೆ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ.

            ಪರಿಸ್ಥಿತಿ ನಿಯಂತ್ರಣಕ್ಕೆ: ನರೇಶ್‌ ಮೀನಾ ಅವರನ್ನು ಬಂಧಿಸಿದ ಬಳಿಕ ಟೊಂಕ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಆದರೀಗ ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

             ಘಟನೆ ಬಳಿಕ ಬೆಂಬಲಿಗರು ಕೆಲವು ಪ್ರದೇಶಗಳಲ್ಲಿ ಗಲಾಟೆ ಮಾಡಿದರು. ಬುಧವಾರ ರಾತ್ರಿ 60 ದ್ವಿಚಕ್ರ ವಾಹನಗಳು ಹಾಗೂ 18 ನಾಲ್ಕು ಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಘಟನೆ ಬಳಿಕ 60 ಜನರನ್ನು ವಶಕ್ಕೆ ಪಡೆಯಲಾಗಿದೆ. ಹಿಂಸಾಚಾರದಿಂದಾಗಿ ಟೊಂಕ್‌-ಸವಾಯಿ ಮಾಧೊಪುರ ಮಾರ್ಗದಲ್ಲಿರುವ ಅಲಿಘಡ ಪಟ್ಟಣವನ್ನು 10 ಗಂಟೆ ಬಂದ್‌ ಮಾಡಲಾಗಿತ್ತು.

              ನರೇಶ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಟೊಂಕ್ ಹಾಗೂ ಸುತ್ತಲಿನ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಜೈಪುರ- ಕೋಟಾ ಹೆದ್ದಾರಿಯಲ್ಲಿ ಹೋಟೆಲ್‌ಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅವರ ಬೆಂಬಲಿಗರು ಜಮಾಯಿಸಿದ್ದರು ಎಂದು ಅವರು ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries