ಕಾಸರಗೋಡು: ರಂಗ ಚಿನ್ನಾರಿ ಕಾಸರಗೋಡಿನ ಅಂಗ ಸಂಸ್ಥೆ ಸ್ವರಚಿನ್ನಾರಿ ವತಿಯಿಂದ ರಾಗ ಸಂಯೋಜನೆ ಕುರಿತಾದ ಒಂದು ದಿನದ ಶಿಬಿರ'ರಾಗಾಲಾಪ' ಡಿ. 14ರಂದು ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ.
ರಾಷ್ಟ್ರಪ್ರಶಸ್ತಿವಿಜೇತ, ನಾಡುಕಂಡ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಸಾರಥ್ಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಶಿಬಿರ ನಡೆಯುವುದು. ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಮೊಬೈಲ್ ಸಂಖ್ಯೆ(9447693248, 8075599477, 9741919699)ಸಂಪರ್ಕಿಸಬಹುದಾಗಿದೆ. ನೋಂದಾವಣೆ ಉಚಿತವಾಗಿರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೊಸ ಹಾಡುಗಳಿಗೆ ರಾಗ ಸಂಯೋಜನೆ ನಡೆಸುವುದು ಹೇಗೆ ಎಂಬ ಕುರಿತಾಗಿ ಅವುಗಳನ್ನು ಶಿಬಿರಾರ್ಥಿಗಳಿಂದ ಹಾಡಿಸಿ, ಕಲಿಸುವ ಕಾರ್ಯಕ್ರಮ ಇದಾಗಿರುವುದರಿಂದ ಕಾಸರಗೋಡಿನ ಕವಿಗಳಿಂದ ಹಾಡುಗಳನ್ನು ಆಹ್ವಾನಿಸಲಾಗಿದೆ. ಹಾಡುಗಳು ಎರಡು ಚರಣ ದಾಟದೆ, ಆಯ್ದ ಎರಡು ಉತ್ತಮ ಭಾವಗೀತೆಗಳಿಗೆ ಪ್ರಾಧಾನ್ಯತೆ ನೀಡಲಾಗುವುದು. ಈ ಮೊದಲು ರಚಿಸಿ, ಪ್ರಕಟಿಸಿದ ಹಾಡುಗಳನ್ನು ಪರಿಗಣಿಸಲಾಗುವುದಿಲ್ಲ. ಹಾಡುಗಳನ್ನು ನ. 20ರ ಮೊದಲು ವಾಟ್ಸಪ್ ಸಂಖ್ಯೆಗೆ(6282731359)ಕಳುಹಿಸಿಕೊಡಬೇಕಾಗಿದೆ.