ಬದಿಯಡ್ಕ: ಮಣಿಪಾಲದ ರಾಗ ಸುಧಾರಸ ತಂಡದವರಿಂದ ಭಾರತ ಸರ್ಕಾರದ ಸಾಂಸ್ಕøತಿಕ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಕನೆ ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನ.14 ರಿಂದ 24 ರ ವರೆಗೆ ವಿವಿಧ ಕೇಂದ್ರಗಳಲ್ಲಿ ವಿಶೇಷ ಸಂಗೀತ-ನೃತ್ಯ ಕಲಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ನ.15 ರಂದು ಶುಕ್ರವಾರ ಶ್ರೀಮದ್.ಎಡನೀರು ಮಠದ ಸಭಾ ಭವನದಲ್ಲಿ ಸಂಗೀತ ಸಂಜೆ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ.
ಅಂದು ಸಂಜೆ 4.30ಕ್ಕೆ ಉಡುಪಿಯ ಶಿವಾನಂದ ಡಿ. ಮತ್ತು ತಂಡದವರಿಂದ ದಾಸವಾಣಿ ನಡೆಯಲಿದೆ. ಬಳಿಕ ಸಂಜೆ 5.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ‘ಲಲಿತಕಲಾ ಪೋಷಕ ಮಣಿ’ ಪ್ರಶ್ತಿಯನ್ನು ಉಡುಪಿಯ ರಜನಿ ಮೆಮೋರಿಯಲ್ ಟ್ರಸ್ಟ್ ನ ಸ್ಥಾಪಕ ಟ್ರಸ್ಟಿ ಡಾ.ವಿ.ಅರವಿಂದ ಹೆಬ್ಬಾರ್ ಅವರಿಗೆ ಪ್ರದಾನ ಮಾಡಲಾಗುವುದು. ಎಡನೀರು ಮಠಾಧೀಶರಾದ ಶ್ರೀ.ಮದ್.ಸಚ್ಚಿದಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ಹಿರಿಯ ಜ್ಯೋತಿಷ್ಯ ತಜ್ಞ ವಿಷ್ಣುಪ್ರಸಾದ್ ಹೆಬ್ಬಾರ್, ಪೆರಿಯ ಗೋಕುಲಂ ಗೋಶಾಲೆಯ ಡಾ.ನಾಗರತ್ನ ಹೆಬ್ಬಾರ್, ವಿದುಷಿಃ ಉಷಾ ಈಶ್ವರ ಭಟ್ ಕಾಸರಗೋಡು, ವಿದ್ವಾನ್.ಕಲ್ಮಾಡಿ ಸದಾಶಿವ ಆಚಾರ್ಯ, ವಿದ್ವಾನ್.ಯೋಗೀಶ ಶರ್ಮಾ ಬಳ್ಳಪದವು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬಳಿಕ ನಡೆಯುವ ಶಾಸ್ತ್ರೀಯ ಸಂಗೀತ ಕಚೇರಿಯಲ್ಲಿ ಡಾ.ರಾಜ್ ಕುಮಾರ್ ಭಾರತೀ ಚೆನ್ನೈ ಹಾಡುಗಾರಿಕೆ ನಡೆಸುವರು. ಪಕ್ಕವಾದ್ಯಗಳಲ್ಲಿ ವಿಠ್ಠಲ ರಾಮಮೂರ್ತಿ ಚೆನ್ನೈ(ವಯೋಲಿನ್), ಅನೂರು ಅನಂತಕೃಷ್ಣ ಶರ್ಮಾ ಬೆಂಗಳೂರು ಹಾಗೂ ಎನ್.ವಿದ್ಯಾಶಂಕರ್ ಬೆಂಗಳೂರು(ಮೃದಂಗ), ಪ್ರಣವ್ ಕಾರ್ತಿಕ್ ಬೆಂಗಳೂರು(ಮೋರ್ಸಿಂಗ್)ನಲ್ಲಿ ಸಾಥ್ ನೀಡುವರು. ಶ್ರೀಗೋಪಾಲಕೃಷ್ಣ ಸಂಗೀತ ವಿದ್ಯಾಲಯ ಕಾಸರಗೋಡು, ಶ್ರೀಪುರಂದರದಾಸ ಸಂಗೀತ ಕಲಾ ಮಂದಿರ ಕಾಸರಗೋಡು ಹಾಗೂ ವೀಣಾವಾಧಿನಿ ಸಂಗೀತ ವಿದ್ಯಾಪೀಠ ಬಳ್ಳಪದವು ತಂಡಗಳು ಸಹಕರಿಸಲಿವೆ.