ಕೊಚ್ಚಿ: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ 16 ವರ್ಷದ ಸಂತ್ರಸ್ಥೆಗೆ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಹೈಕೋರ್ಟ್, ಭ್ರೂಣಕ್ಕೆ 26 ವಾರಗಳಿಗಿಂತ ಹೆಚ್ಚು ವಯಸ್ಸಾಗಿರುವುದರಿಂದ ಒಪ್ಪಿಗೆ ನೀಡಿಲ್ಲ.
ತನ್ನ ಪ್ರಿಯಕರ ಅತ್ಯಾಚಾರವೆಸಗಿರುವುದಾಗಿ ಬಾಲಕಿ ಹೇಳಿದ್ದು, ಆ ವೇಳೆಗೆ ಭ್ರೂಣಕ್ಕೆ 26 ವಾರಗಳು ಮತ್ತು ಐದು ದಿನಗಳು ತುಂಬಿದ್ದವು ಎಂದು ವೈದ್ಯರ ಪರೀಕ್ಷೆಯಲ್ಲಿ ಆಕೆಯ ಪೋಷಕರಿಗೆ ತಿಳಿದು ಬಂದಿದೆ.
ಈ ತಿಂಗಳ 22 ರಂದು ಸಂತ್ರಸ್ಥೆಯ ಪೋಷಕರು ಗರ್ಭಪಾತಕ್ಕೆ ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಗರ್ಭಪಾತ ಮಾಡಿದರೂ ಮಗುವನ್ನು ಜೀವಂತವಾಗಿ ಹೊರ ತೆಗೆಯಬಹುದು ಎಂದು ವೈದ್ಯಕೀಯ ಮಂಡಳಿ ವರದಿ ನೀಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನು ಪರಿಗಣಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಸಂತ್ರಸ್ಥೆಯ ಕುಟುಂಬವು ಮಗುವನ್ನು ದತ್ತು ಪಡೆಯಲು ಆಸಕ್ತಿ ಹೊಂದಿದ್ದರೆ ಮಗುವನ್ನು ದತ್ತು ಪಡೆಯಲು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.