HEALTH TIPS

16 ವರ್ಷದೊಳಗಿನವರಿಗೆ ಜಾಲತಾಣ ನಿರ್ಬಂಧ: ಕಾನೂನು ಜಾರಿಗೆ ಆಸ್ಟ್ರೇಲಿಯಾ ಸಿದ್ಧತೆ

 ಮೆಲ್ಬರ್ನ್‌: 16 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಸುವುದನ್ನು ನಿಷೇಧಿಸುವ ಸಂಬಂಧ ಕಾನೂನು ಜಾರಿಗೊಳಿಸಲು ಆಸ್ಟ್ರೇಲಿಯಾ ಸರ್ಕಾರ ಸಿದ್ಧತೆ ನಡೆಸಿದ್ದು 'ಈ ಕಾನೂನು ಜಗತ್ತಿಗೆ ದಾರಿ ದೀಪವಾಗಬಲ್ಲದು' ಎಂದು ಬಣ್ಣಿಸಿದೆ.

ಒಂದು ವೇಳೆ 16 ವರ್ಷದ ಒಳಗಿನ ಮಕ್ಕಳು ಜಾಲತಾಣಗಳಲ್ಲಿ ಖಾತೆ ತೆರೆದರೆ ಅದಕ್ಕೆ ಆಯಾ ಜಾಲತಾಣ ವೇದಿಕೆಗಳೇ ಹೊಣೆ ಎನ್ನುವ ಅಂಶವೂ ಕಾನೂನಿನಲ್ಲಿ ಇರಲಿದೆ.

'ಸಾಮಾಜಿಕ ಮಾಧ್ಯಮವು ನಮ್ಮ ಮಕ್ಕಳಿಗೆ ಕೇಡುಂಟು ಮಾಡುತ್ತಿದೆ. ಇದನ್ನು ಇಲ್ಲಿಗೇ ಅಂತ್ಯಗೊಳಿಸಬೇಕು ಎಂದು ನಿರ್ಧರಿಸಿದ್ದೇನೆ' ಎಂದು ಪ್ರಧಾನಿ ಆಯಂಟೊನಿ ಅಲ್ಬನೀಸ್ ಗುರುವಾರ ಪತ್ರಕರ್ತರಿಗೆ ತಿಳಿಸಿದರು.

'ನವೆಂಬರ್‌ 18ರಿಂದ ಅಧಿವೇಶನ ಆರಂಭವಾಗಲಿದೆ. ಅಧಿವೇಶನ ಅಂತ್ಯವಾಗುವ ಎರಡು ವಾರಗಳ ಮೊದಲೇ ಮಸೂದೆ ಮಂಡಿಸಲಾಗುವುದು. ಇದು ಅಂಗೀಕಾರವಾದ 12 ತಿಂಗಳ ಬಳಿಕ ಕಾನೂನು ಜಾರಿಯಾಗಲಿದೆ' ಎಂದರು.

'ಎಕ್ಸ್‌', ಟಿಕ್‌ಟಾಕ್‌, ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ನಲ್ಲಿ ಈಗಾಗಲೇ ಖಾತೆ ಹೊಂದಿರುವ ಆಸ್ಟ್ರೇಲಿಯಾದ 16 ವರ್ಷದ ಒಳಗಿನ ಮಕ್ಕಳನ್ನು ವೇದಿಕೆಯಿಂದ ಹೇಗೆ ಹೊರಹಾಕಬೇಕು ಎನ್ನುವುದರ ಕುರಿತು ಆಯಾ ವೇದಿಕೆಗಳೇ ದಾರಿ ಕಂಡುಕೊಳ್ಳಬೇಕಿದ' ಎಂದರು.

'16 ವರ್ಷದ ಒಳಗಿನ ಮಕ್ಕಳ ಖಾತೆಗಳು ಯಾವುದೇ ಜಾಲತಾಣ ವೇದಿಕೆಗಳಲ್ಲಿ ಇದ್ದರೆ, ಆಯಾ ವೇದಿಕೆಗಳೇ ಇದಕ್ಕೆ ಹೊಣೆಗಾರರು ಹೊರತು ಮಕ್ಕಳು ಹಾಗೂ ಅಥವಾ ಪೋಷಕರು ಅಲ್ಲ. ಈ ಸಂಬಂಧ ವೇದಿಕೆಗಳಿಗೆ ದಂಡವನ್ನೂ ವಿಧಿಸಲಾಗುತ್ತದೆ' ಎಂದು ಸ್ಪಷ್ಟಪಡಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries