ತಿರುವನಂತಪುರಂ: ಕಳೆದ 12 ವರ್ಷಗಳಲ್ಲಿ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆ ಇಲ್ಲದೆ ರಾಜ್ಯದಲ್ಲಿ 1870 ಮಂದಿ ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ, ಮೆದುಳು ಸತ್ತ ರೋಗಿಗಳಿಗೆ ಅಂಗಾಂಗ ದಾನದಲ್ಲಿ ಇಳಿಕೆ ಕಂಡುಬಂದಿದೆ. ಈ ರೀತಿ 377 ಮಂದಿಯ ಅಂಗಾಂಗಗಳನ್ನು ಮಾತ್ರ ದಾನ ಮಾಡಲಾಗಿದೆ.
ರಾಜ್ಯದಲ್ಲಿ ಈ ವರ್ಷ ಮೆದುಳು ನಿಷ್ಕ್ರಿಯಗೊಂಡ ಅಂಗಾಂಗ ದಾನಿಗಳ ಸಂಖ್ಯೆ ಮತ್ತೆ ಕುಸಿದಿದೆ. ನವೆಂಬರ್ 18 ರವರೆಗೆ ಕೇವಲ 10 ಜನರು ಮಾತ್ರ ಮೆದುಳಿನ ಸಾವಿನ ನಂತರ ತಮ್ಮ ಅಂಗಗಳನ್ನು ದಾನ ಮಾಡಿದ್ದಾರೆ. ಕಳೆದ ವರ್ಷ ಇದು 19 ಆಗಿತ್ತು. ಅಂಗಾಂಗ ದಾನಕ್ಕೆ ಸಂಬಂಧಿಸಿದ ವಿವಾದಗಳು ಮತ್ತು ಪ್ರಕರಣಗಳು ದಾನಿಗಳ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗಿವೆ ಎಂದು ಅಂದಾಜಿಸಲಾಗಿದೆ.
ಅಂಗದಾನದ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ ಕೆಸೊಟೊ (ಕೇರಳ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ) ಪ್ರಕಾರ, ರಾಜ್ಯದಲ್ಲಿ ಮರಣೋತ್ತರ ಅಂಗಾಂಗ ದಾನಕ್ಕೆ ಸ್ವಯಂಪ್ರೇರಿತರಾದವರ ಸಂಖ್ಯೆ ಪ್ರಸ್ತುತ 2897 ಆಗಿದೆ ಎಂದು ಬೊಟ್ಟುಮಾಡಿದೆ. ಕೇರಳ ರಾಷ್ಟ್ರೀಯ ಮಟ್ಟದಲ್ಲಿ 14ನೇ ಸ್ಥಾನದಲ್ಲಿದೆ. ಸ್ವಯಂ ಸೇವಕರ ಪೈಕಿ ರಾಜಸ್ಥಾನ 40,348 ರೊಂದಿಗೆ ಅಗ್ರಸ್ಥಾನದಲ್ಲಿದೆ. ಕೇರಳದಲ್ಲಿ 2,435 ಮಂದಿ ಕೇಸೊಟೊದಲ್ಲಿ ನೋಂದಾಯಿಸಿಕೊಂಡು ಅಂಗಾಂಗಗಳಿಗಾಗಿ ಕಾಯುತ್ತಿದ್ದಾರೆ. ಈ ಪೈಕಿ 1978 ಮಂದಿಗೆ ಕಿಡ್ನಿ ಅಗತ್ಯವಿದೆ.