ಕಲ್ಪಟ್ಟ: ವಯನಾಡಿನಲ್ಲಿ ನವೆಂಬರ್ 19 ರಂದು ಯುಡಿಎಫ್ ಮತ್ತು ಎಲ್‍ಡಿಎಫ್ ಹರತಾಳ ಘೋಷಿಸಿವೆ. ಭೂಕುಸಿತ ದುರಂತದಲ್ಲಿ ಕೇಂದ್ರದ ನೆರವು ವಿಳಂಬವಾಗುತ್ತಿದೆ ಎಂದು ಆರೋಪಿಸಿ ಹರತಾಳ ಘೋಷಿಸಲಾಗಿದೆ.
ವಯನಾಡ್ ಭೂಕುಸಿತ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲ್ಲ ಎಂದು ಎರಡೂ ರಂಗಗಳು ಸೂಚಿಸುತ್ತವೆ. ನವೆಂಬರ್ 19 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಹರತಾಳ ನಡೆಯಲಿದೆ. ಪುನರ್ವಸತಿ ವಿಳಂಬ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಹರತಾಳ ಎಂದು ಶಾಸಕ ಟಿ.ಸಿದ್ದೀಕ್ ತಿಳಿಸಿದ್ದಾರೆ. ಅಂಗಡಿಗಳನ್ನು ಮುಚ್ಚಿ, ವಾಹನಗಳನ್ನು ರಸ್ತೆಗಿಳಿಸದೆ ಹರತಾಳ ನಡೆಸಬೇಕೆಂದೂ ಆಗ್ರಹಿಸಿದರು.
ಯುಡಿಎಫ್ ಹರತಾಳವನ್ನು ಘೋಷಿಸಿದ ಬೆನ್ನಲ್ಲೇ, ಎಲ್ಡಿಎಫ್ ಕೂಡ ಹರತಾಳ ಘೋಷಿಸಿತು. ಇದೇ ವೇಳೆ, ಕೇಂದ್ರ ರಾಜ್ಯ ಸಚಿವ ಜಾರ್ಜ್ ಕುರಿಯನ್, ವಯನಾಡಿನಲ್ಲಿ ಸಂಭವಿಸಿದ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನಿಯಮಗಳನ್ನು ಅನುಸರಿಸಿದರೆ ಮಾತ್ರ ಕೇರಳದ ಖಾತೆಯಲ್ಲಿ 782 ಕೋಟಿ ರೂ.ಲಭಿಸುತ್ತದೆ ಎಂದಿರುವರು.
2024-25ರ ಆರ್ಥಿಕ ವರ್ಷಕ್ಕೆ ಎಲ್ಲ ರಾಜ್ಯಗಳಂತೆ ಕೇರಳಕ್ಕೂ ವಿಪತ್ತು ಪರಿಹಾರ ನಿಧಿ ನೀಡಲಾಗಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.