ತಿರುವನಂತಪುರಂ: ಶಬರಿಮಲೆಯಲ್ಲಿ ಯಾತ್ರಾರ್ಥಿಗಳಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸಲು ಕೇರಳ ಆರೋಗ್ಯ ಇಲಾಖೆ ಶಬರಿಮಲೆಯಲ್ಲಿ ರಾಪಿಡ್ ಆ್ಯಕ್ಷನ್ ಆಂಬ್ಯುಲೆನ್ಸ್ ಘಟಕಗಳನ್ನು ನಿಯೋಜಿಸಿದೆ.
ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಆಂಬ್ಯುಲೆನ್ಸ್ ಘಟಕಗಳು ಮತ್ತು ಕಣಿವ್ 108 ಕಾರ್ಯಕ್ರಮದ ಸೇವೆಗಳ ಜೊತೆಗೆ ಯಾತ್ರಾ ಮಾರ್ಗದಲ್ಲಿ ಕ್ಷಿಪ್ರ ಘಟಕಗಳನ್ನು ನಿಯೋಜಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿರುವರು. ಆಸ್ಪತ್ರೆಗಳಲ್ಲಿ ಸಂಪೂರ್ಣ ಸೌಲಭ್ಯಗಳಲ್ಲದೆ, 19 ತುರ್ತು ವೈದ್ಯಕೀಯ ಕೇಂದ್ರಗಳು ಮತ್ತು ಹಲವಾರು ಆಮ್ಲಜನಕ ಪಾರ್ಲರ್‍ಗಳನ್ನು ಪಂಬಾದಿಂದ ಸನ್ನಿಧಾನಂ ಮತ್ತು ಸಾಂಪ್ರದಾಯಿಕ ಕಾನನಪಥದ ಉದ್ದಕ್ಕೂ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಅಲ್ಲದೆ, ಪಂಬಾ ಆಸ್ಪತ್ರೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ವೈದ್ಯಕೀಯ ಘಟಕ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯವಿರುವ ಯಾತ್ರಾರ್ಥಿಗಳು ಟೋಲ್ ಫ್ರೀ ಸಂಖ್ಯೆ 108 ಅನ್ನು ಸಂಪರ್ಕಿಸಿ ಸೇವೆಯನ್ನು ಪಡೆಯಬಹುದು ಮತ್ತು ಅದಕ್ಕಾಗಿ ತುರ್ತು ಸ್ಥಿರ ದೂರವಾಣಿ ಸಂಖ್ಯೆಯೂ ಇದೆ ಎಂದು ಸಚಿವರು ಹೇಳಿದರು.
ಯಾತ್ರೆಯ ಸಮಯದಲ್ಲಿ ಭಕ್ತರಿಗೆ ಸುಗಮ ಮತ್ತು ಸುರಕ್ಷಿತ ದರ್ಶನವನ್ನು ಖಚಿತಪಡಿಸಿಕೊಳ್ಳಲು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಪೆÇಲೀಸರು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಲಾಗಿದೆ.