HEALTH TIPS

ಗರ್ಭಧಾರಣೆ-ಮಗುವಿಗೆ 2 ವರ್ಷ ತುಂಬುವವರೆಗೆ ಸಕ್ಕರೆ ಸೇವನೆ ನಿರ್ಬಂಧ; ಶೇ.35ರಷ್ಟು ಮಧುಮೇಹ ಅಪಾಯ ಕಡಿಮೆ: ಅಧ್ಯಯನ

Top Post Ad

Click to join Samarasasudhi Official Whatsapp Group

Qries

ನವದೆಹಲಿ: ಬದಲಾದ ಜೀವನಶೈಲಿಯಿಂದ ಇಂದು ಮಕ್ಕಳಲ್ಲಿಯೂ ಮಧುಮೇಹವನ್ನು ಸರ್ವೇಸಾಮಾನ್ಯವಾಗಿ ನೋಡುತ್ತಿದ್ದೇವೆ. ಇದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಹುಟ್ಟಲಿರುವ ಮಗುವಿನ ಆರೋಗ್ಯವು ತಾಯಿಯ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ಅಧ್ಯಯನವೊಂದು ಹಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ.

ತಾಯಿಯು ಗರ್ಭಧಾರಣೆಯಿಂದ ಮಗು ಹುಟ್ಟಿದ 2 ವರ್ಷಗಳ ವರೆಗೆ ಮಕ್ಕಳಿಗೆ ಸಕ್ಕರೆ ಅಂಶಗಳನ್ನು ಪರಿಚಯಿಸದೇ ಇದ್ದರೆ, ವಯಸ್ಕ ಜೀವನದಲ್ಲಿ ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಇದು ಕಡಿಮೆ ಮಾಡುತ್ತದೆ ಎಂದು ಹೇಳಿದೆ.

ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಈ ಅಧ್ಯಯನ ನಡೆಸಿದ್ದು, ಈ ಅಧ್ಯಯನವು ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಮಕ್ಕಳ ಆರಂಭಿಕ ಜೀವನದಲ್ಲಿ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದರಿಂದ ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಶೇ.35% ರಷ್ಟು ಮತ್ತು ಅಧಿಕ ರಕ್ತದೊತ್ತಡವು ಶೇ.20 ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ.

ನ್ಯೂಟ್ರಿಷನ್ ಅಡ್ವೊಕಸಿಯ ಸಂಚಾಲಕ ಡಾ ಅರುಣ್ ಗುಪ್ತಾ ಅವರು ಮಾತನಾಡಿ, ಗರ್ಭಾವಸ್ಥೆಯಲ್ಲಿ ಮತ್ತು ಬಾಲ್ಯದಲ್ಲಿ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವಂತೆ ಅಧ್ಯಯನ ಸಲಹೆ ನೀಡಿದೆ ಎಂದು ಹೇಳಿದ್ದಾರೆ,

ಸೆಪ್ಟೆಂಬರ್ 1953 ರಲ್ಲಿ 2ನೇ ಮಹಾಯುದ್ಧದಿಂದ ಬ್ರಿಟನ್ ಚೇತರಿಸಿಕೊಳ್ಳುತ್ತಿರುವಾಗ ಸಕ್ಕರೆ ಪಡಿತರದಿಂದಾಗಿ ಸುಮಾರು 60,000 ಜನರು ಪ್ರಭಾವಿತರಾಗಿದ್ದರು. ಸಕ್ಕರೆ ಪಡಿತರ ವಿತರಣೆ ಬಳಿಕ ಜನರದಲ್ಲಿ ದೀರ್ಘಕಾಲಿಕ ರೋಗಗಳಿಗೆ ಒಳಗಾಗುವುದು ಹೆಚ್ಚಾಗಿರವುದನ್ನು ಅಧ್ಯಯನ ಪತ್ತೆ ಮಾಡಿದೆ.

ಅಧ್ಯಯನ ನಡೆಸಿದ ಸಂಶೋಧಕರು ಪಡಿತರ ವಿತರಣೆಗೂ ಮುನ್ನ ಹಾಗೂ ನಂತರದ ಗರ್ಭಿಣಿಯರ ಆರೋಗ್ಯ ಮತ್ತು ಮಕ್ಕಳ ಆರೋಗ್ಯವನ್ನು ಅವಲೋಕನ ನಡೆಸಿದ್ದು, ಇದರ ನಡುವಿನ ವ್ಯತ್ಯಾಸವು ಮಗುವಿನ ಜೀವನದ ಮೊದಲ 1,000 ದಿನಗಳು ಅದರ ಭವಿಷ್ಯದ ಆರೋಗ್ಯವನ್ನು ರೂಪಿಸಲು ನಿರ್ಣಾಯಕ ಅವಧಿಯಾಗಿದೆ ಎಂಬುದನ್ನು ಕಂಡುಕೊಂಡಿದೆ.

ಗರ್ಭಾವಸ್ಥೆಯಲ್ಲಿ ತಾಯಿ ಸೇವನೆ ಮಾಡುವ ಆಹಾರವು ಅತ್ಯಂತ ಮುಖ್ಯವಾಗಿದೆ, ಕಡಿಮೆ ಸಕ್ಕರೆಯ ಆಹಾರದ ಮೂರನೇ ಒಂದು ಭಾಗವು ಗರ್ಭದಲ್ಲಿರುವಾಗಲೇ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಮಗುವಿಗೆ ಗರ್ಭದಲ್ಲಿರುವಾಗ ಸಕ್ಕರೆ ಅಂಶವನ್ನು ಕಡಿತಗೊಳಿಸಿದಾಗ ಮತ್ತು ಘನ ಆಹಾರಗಳ ಮೂಲಕ ಆಹಾರ ಸೇವಿಸುವಂತೆ ಮಾಡಿದರೆ ಆರೋಗ್ಯದಲ್ಲಿ ಸುಧಾರಣೆಗಳನ್ನು ತರಬಹುದು ಎಂದು ಅಧ್ಯಯನ ತಿಳಿಸಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries