ನವದೆಹಲಿ: 2023ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲಾದ ಒಟ್ಟು 89,000 ಸಾವುಗಳ ಪೈಕಿ ಶೇ 24ರಷ್ಟು ಮಂದಿ ಕಾಲರಾ, ಅತಿಸಾರ, ಕ್ಷಯ ಮತ್ತು ಹೆಪಟೈಟಿಸ್ ಬಿ ಮುಂತಾದ ಸಾಂಕ್ರಾಮಿಕ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ ಎಂದು ದೆಹಲಿ ಸರ್ಕಾರದ ವರದಿ ಹೇಳಿದೆ.

ದೆಹಲಿ ಸರ್ಕಾರದ ಅರ್ಥಿಕ ಮತ್ತು ಅಂಕಿಅಂಶಗಳ ವಿಭಾಗವು 2023ರ ದೆಹಲಿಯ ವೈದ್ಯಕೀಯ ಪ್ರಮಾಣೀಕರಣ ವರದಿಯನ್ನು ಬಿಡುಗಡೆ ಮಾಡಿದೆ.
2023ರಲ್ಲಿ ಕ್ಯಾನ್ಸರ್ ಸಂಬಂಧಿತ ಕಾಯಿಲೆಗಳಿಂದಾಗಿ 6,054 ಮಂದಿ ಮೃತಪಟ್ಟಿದ್ದಾರೆ. 2022ರಲ್ಲಿ 5,409 ಮಂದಿ ಕೊನೆಯುಸಿರೆಳೆದಿದ್ದರು.
ಅಪೌಷ್ಟಿಕತೆಯಿಂದ 1,517, ನ್ಯುಮೋನಿಯಾ 1,373, ಸೆಪ್ಟಿಸೆಮಿಯಾ ಮತ್ತು ಹೈಪೋಕ್ಸಿಯಾ (1,109), ಉಸಿರಾಟ ಸಮಸ್ಯೆಯಿಂದ 704 ಶಿಶುಗಳು ಮೃತಪಟ್ಟಿವೆ ಎಂದು ಹೇಳಲಾಗಿದೆ.
45-64 ವರ್ಷ ವಯಸ್ಸಿನವರಲ್ಲಿ ಗರಿಷ್ಠ ಸಾವುಗಳು ಸಂಭವಿಸಿವೆ. 2023ರಲ್ಲಿ 28,611 ಮಂದಿ ಪುರುಷರು ಮತ್ತು 26,096 ಮಂದಿ ಮಹಿಳೆಯರು ಈ ವಿಭಾಗದಲ್ಲಿ ಮೃತಪಟ್ಟಿದ್ದಾರೆ ತಿಳಿದುಬಂದಿದೆ.