ಬದಿಯಡ್ಕ: ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಬೆಂಗಳೂರು ನೇತೃತ್ವದಲ್ಲಿ ತುಳುರತ್ನ, ಬಹುಭಾಷಾ ವಿದ್ವಾಂಸ ಡಾ.ಪಿ.ವೆಂಕಟರಾಜ ಪುಣಿಚಿತ್ತಾಯ ಅವರ ಸ್ಮರಣೆ ಪುವೆಂಪು ಬನೆನಪು 2024 ಕಾರ್ಯಕ್ರಮ ನ.20 ರಂದು ಬೆಳಿಗ್ಗೆ 9 ರಿಂದ ಬದಿಯಡ್ಕ ವಳಮಲೆ ಇರಾ ಸಭಾಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸಮಾರಂಭದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ದಿವ್ಯ ಉಪಸ್ಥಿತರಿರುವರು. ನಿವೃತ್ತ ಉಪನ್ಯಾಸಕ, ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆ ಉದ್ಘಾಟಿಸುವರು. ಕಲ್ಕೂರ ಪ್ರತಿಷ್ಠಾನದ ಎಸ್.ಪ್ರದೀಪ್ ಕುಮಾರ್ ಕಲ್ಕೂರ ನುಡಿ ನಮನ ಸಲ್ಲಿಸುವರು. ಉಪನ್ಯಾಸಕ ಡಾ.ರಾಧಾಕೃಷ್ಣ ಬೆಳ್ಳೂರು ಕೃತಿ ಪರಿಚಯ ನೀಡುವರು. ಈ ಸಂದರ್ಭ ಹಿರಿಯ ವಿದ್ವಾಂಸ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರಿಗೆ ಪುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಬದಿಯಡ್ಕ ಗ್ರಾ.ಪಂ.ಅಧ್ಯಕ್ಷೆ ಶಾಂತಾ ಬಿ., ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಎಡನೀರು ಮುಖ್ಯ ಅತಿಥಿಗಳಾಗಿರುವರು. ಗಮಕ ಕಲಾಪರಿಷತ್ತಿನ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ನಿವೃತ್ತ ಉಪನ್ಯಾಸಕ ಪುರುಷೋತ್ತಮ ಪುಣಿಚಿತ್ತಾಯ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಗಡಿನಾಡ ಸಾಂಸ್ಕøತಿಕ-ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ, ಧರ್ಮಸ್ಥಳ ಯೋಜನೆಯ ಬಿ.ಸಿ.ಟ್ರಸ್ಟ್ ನಿರ್ದೇಶಕ ಪ್ರವೀಣ್ ಕುಮಾರ್, ಕರ್ನಾಟಕ ಜಾನಪದ ಪರಿಷತ್ತು ಗಡಿನಾಡ ಘಟಕ ಕಾರ್ಯಾಧ್ಯಕ್ಷ ಝಡ್.ಎ.ಕಯ್ಯಾರ್, ಕನ್ನಡ ಭವನ ಸಂಸ್ಥಾಪಕ ವಾಮನ ರಾವ್ ಬೇಕಲ, ಸಾಮಾಜಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ.ನಾಯ್ಕಾಪು, ಸರ್ದಾರ್ ಪಟೇಲ್ ಸಾಂಸ್ಕøತಿಕ ಸಂಘದ ಅಧ್ಯಕ್ಷ ವೃಥ್ವಿರಾಜ್ ಶೆಟ್ಟಿ ಕುಂಬಳೆ, ತುಳುವೆರೆ ಆಯನೊ ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಸ್ವಾಗತ ಸಮಿತಿ ಗೌರವ ಸಲಹೆಗಾರ ರಮಾನಾಥ ರೈ, ಸ್ವಾಗತ ಸಮಿತಿ ಸಂಯೋಜಕ ವಿಜಯರಾಜ ಪುಣಿಚಿತ್ತಾಯ ಪುಂಡೂರು, ಸಂಘಟಕ ಕೃಷ್ಣ ಡಿ.ಬೆಳಿಂಜ ಉಪಸ್ಥಿತರಿರುವರು.