HEALTH TIPS

ಭಗವಂತನ ದರ್ಶನಕ್ಕೆ ಸಂಗೀತೋಪಾಸನೆಯೂ ಮಾರ್ಗ-ಎಡನೀರು ಶ್ರೀ ಅಭಿಮತ-ರಾಗ ಸುಧಾರಸ ಸಂಗೀತೋತ್ಸವ-2024 ರಲ್ಲಿ ಆಶೀರ್ವಚನ

ಬದಿಯಡ್ಕ: ಭಗವಂತನನ್ನು ಒಲಿಸಿಕೊಳ್ಳುವ ವಿಧಾನಗಳಲ್ಲಿ ಸಂಗೀತವೂ ಒಂದು. ನಾದೋಪಾಸನೆ ಆಂತರಂಗಿಕವಾದ ಭಗವಂತನ ಭಾವಸ್ಪುರಣತೆಗೆ ಕಾರಣವಾಗುತ್ತದೆ. ಆಧ್ಯಾತ್ಮ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳು ಎಂದು ಶ್ರೀಮದ್.ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.

ಶ್ರೀ ಎಡನೀರು ಮಠದ ಸಭಾ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಉಡುಪಿಯ ಮಣಿ ಕೃಷ್ಣಸ್ವಾಮಿ ಅಕಾಡೆಮಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ರಾಗ ಸುಧಾರಸ ಸಂಗೀತೋತ್ಸವ-2024’ ರ ಎರಡನೇ ಕಾರ್ಯಕ್ರಮದ ಪ್ರಶಸ್ತಿ ಪ್ರದಾನ-ಸನ್ಮಾನ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಗಾಯನದ ಮೂಲಕ ಹೆಚ್ಚಿನ ತಾತ್ವಿಕ ಅಂಶಗಳು, ಆಧ್ಯಾತ್ಮಿಕ ವಿಚಾರಗಳು ಜನರಿಗೆ ತಲುಪುವ ಮಾಧ್ಯಮವಾಗಿದೆ. ಜಗತ್ತು ಆಧುನಿಕತೆಯತ್ತ ಹೊರಳಿದರೂ ಪಾರಂಪರಿಕ ಸಂಗೀತದತ್ತ ಒಲವು ಕಡಿಮೆಯಾಗಿಲ್ಲ. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಅಹರ್ನಿಶಿ ಸಂಗೀತ ಕಲಾರಾಧನೆ ಸ್ತುತ್ಯರ್ಹ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಾದ್ಯಂತ ಸಂಸ್ಥೆ ಹಮ್ಮಿಕೊಂಡಿರುವ ಸಂಗೀತ ಯಾತ್ರೆ ಹೊಸ ಆಯಾಮಗಳೊಂದಿಗೆ ಆಧ್ಯಾತ್ಮಿಕ, ಕಲಾ ಪ್ರಕಾರಗಳಿಗೆ ನವಚೇತನ ನೀಡುತ್ತದೆ ಎಂದು ಅವರು ತಿಳಿಸಿದರು. 


ಸಮಾರಂಭದಲ್ಲಿ ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಸ್ಥಾಪಕ ಟ್ರಸ್ಟೀ ಡಾ.ವಿ.ಅರವಿಂದ ಹೆಬ್ಬಾರ್ ಅವರಿಗೆ ಲಲಿತಕಲಾ ಪೋಷಕ ಮಣಿ ಪ್ರಶಸ್ತಿ ಪ್ರದಾನಗೈಯ್ಯಲಾಯಿತು. ಜೊತೆಗೆ ಹಿರಿಯ ಸಂಗೀತ ವಿದ್ವಾಂಸೆ ವಿದುಶಿಃ ಶಕುಂತಲಾ ಕೃಷ್ಣ ಭಟ್ ಕುಂಚಿನಡ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಡಾ.ನಾಗರತ್ನ ಹೆಬ್ಬಾರ್, ವಿದುಶಿಃ ಉಷಾ ಈಶ್ವರ ಭಟ್, ವಿದ್ವಾನ್.ಕಲ್ಮಾಡಿ ಸದಾಶಿವ ಆಚಾರ್ಯ, ವಿದ್ವಾನ್.ಯೊಗೀಶ ಶರ್ಮಾ ಬಳ್ಳಪದವು,.ವಿದ್ವಾನ್.ವಿಠ್ಠಲ ರಾಮಮೂರ್ತಿ ಚೆನ್ನೈ, ವಿದುಷಿಃ ಗೀತಾ ಸರಳಾಯ, ಚಂದ್ರಶೇಖರ ನಾವಡ, ವಿದ್ವಾನ್.ಉಳ್ಳಾಲ್ ಮೋಹನ ಕುಮಾರ್, ನಾಗೇಶ್ ಕೆ.ಬಪ್ಪನಾಡು ಉಪಸ್ಥಿತರಿದ್ದರು. ಅಕಾಡೆಮಿಯ ನಿತ್ಯಾನಂದ ರಾವ್ ನಿರೂಪಿಸಿ, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 


ಸಭಾ ಕಾರ್ಯಕ್ರಮಕ್ಕೂ ಮೊದಲು ನಡೆದ ದಾಸವಾಣಿಯಲ್ಲಿ ಶಿವಾನಂದ ಡಿ.ಉಡುಪಿ ಅವರಿಂದ ಹಾಡುಇಗಾರಿಕೆ ನಡೆಯಿತು. ಸುರೇಶ್(ತಬಲಾ), ಜಂಬಣ್ಣ(ತಾಳ)ದಲ್ಲಿ ಸಹಕರಿಸಿದರು.

ಬಳಿಕ ನಡೆದ ಶಾಸ್ತ್ರೀಯ ಸಂಗೀತ ಕಚೇರಿಯಲ್ಲಿ ಅನೀಶ್ ಭಟ್ ಪುತ್ತೂರು  ಅವರಿಂದ ಹಾಡುಗಾರಿಕೆ ನಡೆಯಿತು. ಪಕ್ಕವಾದ್ಯದಲ್ಲಿ ವಿಠ್ಠಲ ರಾಮಮೂರ್ತಿ ಚೆನ್ನೈ(ವಯೋಲಿನ್), ಅನೂರು ಅನಂತಕೃಷ್ಣ ಶರ್ಮಾ, ಎನ್,ವಿದ್ಯಾಶಂಕರ್(ಮೃದಂಗ),ಪ್ರಣವ್ ಕಾತೀಕ (ಮೋರ್ಸಿಂಗ್)ನಲ್ಲಿ ಸಹಕರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries