HEALTH TIPS

2030ರ ವೇಳೆಗೆ ಕನಿಷ್ಠ ಶೇ.30ರಷ್ಟು ಜೀವವೈವಿಧ್ಯದ ಪ್ರದೇಶಗಳ ಸಂರಕ್ಷಣೆಗೆ ಬದ್ಧತೆ ಘೋಷಿಸಿದ ಭಾರತ

ವದೆಹಲಿ :ಭಾರತವು ತನ್ನ ನವೀಕೃತ ಜೀವವೈವಿಧ್ಯ ಕ್ರಿಯಾ ಯೋಜನೆಗೆ ಚಾಲನೆ ನೀಡಿದೆ. ಯೋಜನೆಯು ಜಾಗತಿಕ ಜೀವವೈವಿಧ್ಯ ಗುರಿಗಳಿಗೆ ಅನುಗುಣವಾಗಿ 2030ರ ವೇಳೆಗೆ ದೇಶದಲ್ಲಿಯ ಕನಿಷ್ಠ ಶೇ.30ರಷ್ಟು ಜೀವವೈವಿಧ್ಯ ಪ್ರದೇಶಗಳನ್ನು ಸಂರಕ್ಷಿಸುವ ಉದ್ದೇಶವನ್ನು ಹೊಂದಿದ್ದು, ಇವುಗಳಲ್ಲಿ ಭೂಪ್ರದೇಶ, ಒಳನಾಡು ಜಲ ಪ್ರದೇಶ, ಕರಾವಳಿ ಮತ್ತು ಸಾಗರ ಪ್ರದೇಶಗಳು ಸೇರಿವೆ.

ಕೊಲಂಬಿಯಾದ ಕ್ಯಾಲಿಯಲ್ಲಿ ನಡೆದ 16ನೇ ವಿಶ್ವಸಂಸ್ಥೆ ಜೀವವೈವಿಧ್ಯ ಸಮ್ಮೇಳನದಲ್ಲಿ ಭಾರತವು ತನ್ನ ಪರಿಷ್ಕೃತ ರಾಷ್ಟ್ರೀಯ ಜೀವವೈವಿಧ್ಯ ಕಾರ್ಯತಂತ್ರ ಮತ್ತು ಕ್ರಿಯಾ ಯೋಜನೆ(ಎನ್‌ಬಿಎಸ್‌ಎಪಿ)ಯನ್ನು ಅನಾವರಣಗೊಳಿಸಿದೆ. ಇದರಲ್ಲಿ 2022ರಲ್ಲಿ ಕೆನಡಾದಲ್ಲಿ ನಡೆದಿದ್ದ 15ನೇ ವಿಶ್ವಸಂಸ್ಥೆ ಜೀವವೈವಿಧ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾಗಿದ್ದ ಕನ್ಮಿಂಗ್-ಮಾಂಟ್ರಿಯಲ್ ಜೀವವೈವಿಧ್ಯ ಚೌಕಟ್ಟು(ಕೆಎಂ-ಜಿಬಿಎಫ್) ಅಡಿ ನಿಗದಿಗೊಳಿಸಲಾಗಿದ್ದ 23 ಜಾಗತಿಕ ಗುರಿಗಳಿಗೆ ಅನುಗುಣವಾಗಿ 23 ರಾಷ್ಟ್ರೀಯ ಗುರಿಗಳನ್ನು ಉಲ್ಲೇಖಿಸಲಾಗಿದೆ.

2030ರ ವೇಳೆಗೆ ಕನಿಷ್ಠ ಶೇ.30ರಷ್ಟು ಜಾಗತಿಕ ಭೂ ಪ್ರದೇಶ ಮತ್ತು ಸಾಗರ ಪ್ರದೇಶಗಳ ಸಂರಕ್ಷಣೆ ಕೆಎಂ-ಜಿಬಿಎಫ್‌ನ ಮುಖ್ಯ ಗುರಿಯಾಗಿದೆ. ಅರಣ್ಯ,ಜವುಗು ಭೂಮಿ ಮತ್ತು ನದಿಗಳಂತಹ ಹಾನಿಗೀಡಾಗಿರುವ ಪರಿಸರ ವ್ಯವಸ್ಥೆಗಳು ಸ್ವಚ್ಛ ನೀರು ಮತ್ತು ಗಾಳಿಯಂತಹ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವುದನ್ನು ಮುಂದುವರಿಸುವಂತಾಗಲು ಅವುಗಳ ಪುನರುಜ್ಜೀವನದ ಉದ್ದೇಶವನ್ನೂ ಹೊಂದಿದೆ.

17 ಬೃಹತ್ ಜೀವವೈವಿಧ್ಯ ದೇಶಗಳಲ್ಲೊಂದು ಎಂದು ಪರಿಗಣಿಸಲಾಗಿರುವ ಭಾರತವು 1994ರಲ್ಲಿ ಜೈವಿಕ ವೈವಿಧ್ಯತೆ ಕುರಿತು ವಿಶ್ವ ಸಂಸ್ಥೆ ಸಮಾವೇಶದ ಸದಸ್ಯತ್ವವನ್ನು ಪಡೆದುಕೊಂಡಿದೆ. ಅದು ಜಾಗತಿಕ ಭೂಪ್ರದೇಶದ ಕೇವಲ ಶೇ.2.4 ವಿಸ್ತೀರ್ಣದಲ್ಲಿ ಶೇ.7-8ರಷ್ಟು ವಿಶ್ವದಲ್ಲಿ ದಾಖಲಿತ ಜೀವಿವರ್ಗಗಳನ್ನು ಹೊಂದಿದೆ.

ಪರಿಷ್ಕೃತ ಎನ್‌ಬಿಎಸ್‌ಎಪಿ ಪ್ರಕಾರ ಭಾರತವು 2017-18ರಿಂದ 2021-22ರವರೆಗೆ ಜೀವವೈವಿಧ್ಯ ರಕ್ಷಣೆ,ಸಂರಕ್ಷಣೆ ಮತ್ತು ಮರುಸ್ಥಾಪನೆಗಾಗಿ ಸುಮಾರು 32,200 ಕೋ.ರೂ.ಗಳನ್ನು ವೆಚ್ಚ ಮಾಡಿದೆ. 2029-30ರ ವೇಳೆಗೆ ಜೀವವೈವಿಧ್ಯ ಸಂರಕ್ಷಣೆಗಾಗಿ ವಾರ್ಷಿಕ ಸರಾಸರಿ ವೆಚ್ಚವು 81,664.88 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries