ರಿಯೊ ಡಿಜನೈರೊ: ಜಿ20 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಉಭಯ ದೇಶಗಳ ನಡುವೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಐದು ವರ್ಷಗಳ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತು ಮಾತುಕತೆ ನಡೆಸಿದರು.

2025-29ಕ್ಕೆ ಸಂಬಂಧಿಸಿದ ಈ ಕ್ರಿಯಾ ಯೋಜನೆ 10 ನಿರ್ದಿಷ್ಟ ಅಂಶಗಳನ್ನು ಒಳಗೊಂಡಿದೆ. ಆರ್ಥಿಕತೆ ಮತ್ತು ಹೂಡಿಕೆಯಲ್ಲಿ ಸಹಕಾರ, ಇಂಧನ, ಬಾಹ್ಯಾಕಾಶ, ರಕ್ಷಣೆ, ಸುರಕ್ಷತೆ, ವಲಸೆ ನೀತಿ, ಜನರ ವಿನಿಮಯ ಕಾರ್ಯಕ್ರಮಗಳನ್ನು ಸೇರಿವೆ.
ಈ ಮಾತುಕತೆ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, 'ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವುದಲ್ಲದೇ, ಸಂಸ್ಕೃತಿ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿಯೂ ಸಹಕಾರ ಹೆಚ್ಚಿಸುವ ಕುರಿತು ಚರ್ಚೆ ನಡೆಸಿದೆವು' ಎಂದು ಹೇಳಿದ್ದಾರೆ.
ಭೇಟಿ-ಮಾತುಕತೆ: ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬ್ರೆಜಿಲ್‌ನ ರಿಯೊ ಡಿಜನೈರೊಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ದ್ವಿಪಕ್ಷೀಯ ವೃದ್ದಿ ಉದ್ದೇಶದಿಂದ ಇಟಲಿ, ಇಂಡೊನೇಷ್ಯಾ, ನಾರ್ವೆ, ಪೋರ್ಚುಗಲ್, ಈಜಿಪ್ಟ್, ಸ್ಪೇನ್ ಹಾಗೂ ದಕ್ಷಿಣ ಕೊರಿಯಾ ನಾಯಕರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ.
ಜೊತೆಗೆ, ಅಂತರರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಹಾಗೂ ಐರೋಪ್ಯ ಒಕ್ಕೂಟದ (ಇಯು) ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೆಯೆನ್ ಅವರೊಂದಿಗೂ ಮೋದಿ ಮಾತುಕತೆ ನಡೆಸಿದ್ದಾರೆ.