ನವದೆಹಲಿ: ಬ್ರೆಜಿಲ್‌ನಲ್ಲಿ ನಡೆಯಲಿರುವ ಜಿ20 ದೇಶಗಳ ಸಭೆಯಲ್ಲಿ ಅರ್ಥಪೂರ್ಣ ಮಾತುಕತೆ ನಡೆಯುವುದನ್ನು ತಾವು ಎದುರುನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿ: ಬ್ರೆಜಿಲ್‌ನಲ್ಲಿ ನಡೆಯಲಿರುವ ಜಿ20 ದೇಶಗಳ ಸಭೆಯಲ್ಲಿ ಅರ್ಥಪೂರ್ಣ ಮಾತುಕತೆ ನಡೆಯುವುದನ್ನು ತಾವು ಎದುರುನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾ ದೇಶಗಳ ಪ್ರವಾಸಕ್ಕೂ ಮೊದಲು ಮೋದಿ ಅವರು ಈ ಮಾತು ಹೇಳಿದ್ದಾರೆ.
'ಬ್ರೆಜಿಲ್‌ನಲ್ಲಿ ನಾನು ಜಿ20 ದೇಶಗಳ ಶೃಂಗದಲ್ಲಿ ಭಾಗಿಯಾಗಲಿದ್ದೇನೆ. ಕಳೆದ ವರ್ಷ ಜಿ20 ಗುಂಪಿಗೆ ಭಾರತವು ಯಶಸ್ವಿಯಾಗಿ ಅಧ್ಯಕ್ಷತೆ ವಹಿಸಿದ್ದಾಗ, ಈ ಗುಂಪನ್ನು ಜನಸಾಮಾನ್ಯರ ಗುಂಪನ್ನಾಗಿ ಮೇಲಕ್ಕೆತ್ತಲಾಗಿತ್ತು. ಜಾಗತಿಕ ದಕ್ಷಿಣದ ಆದ್ಯತೆಗಳನ್ನು ಜಿ20 ಗುಂಪಿನ ಕಾರ್ಯಸೂಚಿಗಳಾಗಿ ಮುಖ್ಯವಾಹಿನಿಗೆ ತರಲಾಗಿತ್ತು' ಎಂದು ಮೋದಿ ಅವರು ನೆನಪಿಸಿಕೊಂಡಿದ್ದಾರೆ.
ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಸೋಮವಾರ ಮತ್ತು ಮಂಗಳವಾರ ನಡೆಯುವ ಶೃಂಗಸಭೆಯಲ್ಲಿ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಹಲವು ದೇಶಗಳ ಪ್ರಮುಖರು ಭಾಗಿಯಾಗಲಿದ್ದಾರೆ.
ಜಿ20 ಶೃಂಗದಲ್ಲಿ ಭಾಗಿಯಾದ ನಂತರ ಮೋದಿ ಅವರು ಗಯಾನಾಕ್ಕೆ ತೆರಳಲಿದ್ದಾರೆ. ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಮೋದಿ ಅವರನ್ನು ಅಲ್ಲಿನ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಆಹ್ವಾನಿಸಿದ್ದಾರೆ. ಭಾರತದ ಪ್ರಧಾನಿ ಗಯಾನಾಕ್ಕೆ ಭೇಟಿ ನೀಡುತ್ತಿರುವುದು 50 ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಇದೇ ಮೊದಲು.