ತಿರುವನಂತಪುರಂ: ಅಲ್ತಾರಾ ದೇವಸ್ಥಾನದ ಬಳಿಯ ಮಾನವೀಯಂ ವೀಥಿ ಬಳಿ ಯುವಕನಿಗೆ ಚಾಕುವಿನಿಂದ ಇರಿದ ಆರೋಪಿ ಸ್ತ್ರೀಯನ್ನು ಬಂಧಿಸಲಾಗಿದೆ.
ಮ್ಯೂಸಿಯಂ ಪೋಲೀಸರು ಪತ್ತನಂತಿಟ್ಟ ಜಿಲ್ಲೆಯ ಮಲಯಾಲಪುಳ ಪ್ರದೇಶದ ಅಂಜಿಲಿವಿಲ್ಲಾವೀಟ್ ಪುಹ್ಯಪಾಡ್‍ನ ಸ್ನೇಹಾ ಅನಿಲಿ (23) ಎಂಬಾಕೆಯನ್ನು ಬಂಧಿಸಿದ್ದಾರೆ. ಸ್ನೇಹಾ ಪ್ರಕರಣದ ಐದನೇ ಆರೋಪಿ.
ಕಳೆದ ಗುರುವಾರ ರಾತ್ರಿ ವೆಂಬಾಯಂ ತೇಕಟ ನಿವಾಸಿ ಸುಜಿತ್ (25) ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿತ್ತು.. ಸ್ನೇಹಾ, ಆಕೆಯ ಸ್ನೇಹಿತೆ ಸುಜಿತ್‍ನನ್ನು ಊಟಕ್ಕಾಗಿ ಸ್ಥಳವೊಂದಕ್ಕೆ ಬಲವಂತದಿಂದ ಕರೆದೊಯ್ದಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ. ಮಾದಕ ದ್ರವ್ಯ ಪ್ರಕರಣಗಳ ಆರೋಪಿಗಳಾದ ಶಿಯಾಸ್ ಮತ್ತು ಆತನ ಸ್ನೇಹಿತರು ಸುಜಿತ್‍ಗೆ ಚಾಕುವಿನಿಂದ ಇರಿದಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಪೋಲೀಸರ ಪ್ರಕಾರ, ಘಟನೆಯ ದಿನ ಆರೋಪಿಗಳ ಸೂಚನೆಯಂತೆ ಸ್ನೇಹಾ ಸುಜಿತ್‍ನನ್ನು ಮಾನವೀಯಂ ವೀಥಿಗೆ ಕರೆದೊಯ್ದಿದ್ದರು. ಸ್ನೇಹಾ ಸುಜಿತ್ ನ ಸ್ನೇಹಿತೆಯಾಗಿದ್ದಳು. ಸ್ನೇಹಾ ಊಟ ಕೊಡುಸುವುದಾಗಿ ಹೇಳಿ ಸುಜಿತ್‍ನನ್ನು ಅಲ್ತಾರ ದೇವಸ್ಥಾನದ ಬಳಿ ಕರೆತಂದಿದ್ದಾಳೆ. ಈ ವೇಳೆ ಸುಜಿತ್ ಹಾಗೂ ಅಲ್ಲಿ ಹೊಂಚುಹಾಕಿ ಕುಳಿತಿದ್ದ ಶಿಯಾಸ್ ನಡುವೆ ವಾಗ್ವಾದ ನಡೆದಿದೆ. ಆಗ ಶಿಯಾಸ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಸುಜಿತ್ ಗೆ ಇರಿದಿದ್ದಾನೆ.
ಯುವತಿಯ ವಿಚಾರಣೆಯಿಂದ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿ ಪೋಲೀಸರಿಗೆ ಲಭಿಸಿದೆ ಎಂದು ವರದಿಯಾಗಿದೆ.