ಕೊಲ್ಲಂ: ದೇಶದ ಮೊದಲ 2್ಠ4*7 ಆನ್‍ಲೈನ್ ಕೋರ್ಟ್ ಬುಧವಾರದಿಂದ ಕೊಲ್ಲಂನಲ್ಲಿ ಕಾರ್ಯನಿರ್ವಹಿಸಲಿದೆ. ಹೊಸ ಆನ್‍ಲೈನ್ ನ್ಯಾಯಾಲಯವು ಕೊಲ್ಲಂನ ಮೂರು ನ್ಯಾಯಾಂಗ ಪ್ರಥಮ ದರ್ಜೆ ನ್ಯಾಯಾಲಯಗಳು ಮತ್ತು ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಲ್ಲಿ ನೆಗೋಷಿಯೇಬಲ್ ಇನ್‍ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ದಾಖಲಾಗಿರುವ ಬೌನ್ಸ್ ಚೆಕ್ ಪ್ರಕರಣಗಳನ್ನು ವ್ಯವಹರಿಸುತ್ತದೆ.
ಕಕ್ಷಿದಾರರಾಗಲಿ, ವಕೀಲರಾಗಲಿ ನ್ಯಾಯಾಲಯಕ್ಕೆ ಹಾಜರಾಗುವಂತಿಲ್ಲ. ಕಾಗದದ ಮೇಲೆ ಪ್ರಕರಣಗಳನ್ನು ದಾಖಲಿಸುವ ಬದಲು ವೆಬ್‍ಸೈಟ್‍ನಲ್ಲಿ ಆನ್‍ಲೈನ್‍ನಲ್ಲಿ ನಿಗದಿತ ನಮೂನೆಯನ್ನು ಸಲ್ಲಿಸುವ ಮೂಲಕ ಹೊಸ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ.
ಪ್ರಕರಣದ ಎಲ್ಲಾ ಪ್ರಕ್ರಿಯೆಗಳು ಆನ್‍ಲೈನ್‍ನಲ್ಲಿ ನಡೆಯಲಿದೆ. ಪ್ರಕರಣದ ನಡಾವಳಿಗಳನ್ನು ಪರಿಶೀಲಿಸುವ ಕಾರ್ಯವಿಧಾನವೂ ಇದೆ. ಇದರ ಮುಖ್ಯ ಪ್ರಯೋಜನವೆಂದರೆ ದಿನದ 24 ಗಂಟೆಗಳಲ್ಲಿ ಯಾವಾಗ ಬೇಕಾದರೂ ಪ್ರಕರಣವನ್ನು ದಾಖಲಿಸಬಹುದು ಮತ್ತು ಆನ್‍ಲೈನ್‍ನಲ್ಲಿ ನ್ಯಾಯಾಲಯದ ವ್ಯವಸ್ಥೆಯನ್ನು ಪ್ರವೇಶಿಸಬಹುದು. ಆರೋಪಿಗಳಿಗೆ ಸಮನ್ಸ್ ಅನ್ನು ಅವರ ಆಯಾ ಪೋಲೀಸ್ ಠಾಣೆಗಳಿಗೆ ಆನ್‍ಲೈನ್‍ನಲ್ಲಿ ಕಳುಹಿಸಲಾಗುತ್ತದೆ. ಜಾಮೀನು ಅರ್ಜಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬಹುದು ಮತ್ತು ಜಾಮೀನು ಪಡೆಯಬಹುದು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕು. ನ್ಯಾಯಾಲಯದ ಶುಲ್ಕವನ್ನು ಇ-ಪಾವತಿ ಮೂಲಕ ಪಾವತಿಸಬಹುದು.