HEALTH TIPS

ಯುಪಿ | ರೈಲ್ವೆ ಹಳಿ ಮೇಲೆ 25 ಅಡಿ ಉದ್ದದ ಕಬ್ಬಿಣದ ರಾಡ್ ಪತ್ತೆ: ತಪ್ಪಿದ ಅನಾಹುತ

ಪಿಲಿಭಿತ್ : ಜಹಾನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲಿಭಿತ್-ಬರೇಲಿ ರೈಲ್ವೆ ಹಳಿ ಮೇಲೆ ಇಟ್ಟಿದ್ದ 25 ಅಡಿ ಉದ್ದದ ಕಬ್ಬಿಣದ ರಾಡ್ ಅನ್ನು ರೈಲು ಚಾಲಕ ಪತ್ತೆಹಚ್ಚಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಗಿದೆ. 

'ಲಾಲೂರಿ ಖೇಡಾ ನಿಲ್ದಾಣದ ಬಳಿ ಪಿಲಿಭಿತ್ -ಬರೇಲಿ ನಡುವೆ ಸಂಚರಿಸುವ ರೈಲು ಎಂಜಿನ್‌ಗೆ ಕಬ್ಬಿಣದ ರಾಡ್ ಬಡಿದ ಪರಿಣಾಮ ಕೆಲಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಹಳಿ ಮೇಲೆ ಕಬ್ಬಿಣದ ರಾಡ್ ಇಟ್ಟಿರುವುದನ್ನು ಮನಗಂಡ ಚಾಲಕ ತಕ್ಷಣ ರೈಲು ನಿಲ್ಲಿಸಿದ್ದಾರೆ' ಎಂದು ಪೊಲೀಸ್ ಅಧಿಕಾರಿ ದೀಪಕ್ ಚತುರ್ವೇದಿ ತಿಳಿಸಿದ್ದಾರೆ.

ಜಹಾನಾಬಾದ್ ಮತ್ತು ಶಾಹಿ ರೈಲು ನಿಲ್ದಾಣಗಳ ನಡುವಿನ ರೈಲ್ವೆ ಕ್ರಾಸಿಂಗ್ ಬಳಿ ಹಳಿ ಮೇಲೆ ಕಬ್ಬಿಣದ ರಾಡ್ ಇಡಲಾಗಿತ್ತು ಎಂದು ರೈಲ್ವೆ ವಿಭಾಗದ ಹಿರಿಯ ಎಂಜಿನಿಯರ್ ನೇತ್ರಾಪಾಲ್ ಸಿಂಗ್ ಹೇಳಿದ್ದಾರೆ.

ರೈಲು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುವ ಉದ್ದೇಶದಿಂದ ಕಿಡಿಗೇಡಿಗಳು ಪಿತೂರಿ ನಡೆಸಿದ್ದಾರೆ ಎಂದು ಸಿಂಗ್ ವಿವರಿಸಿದ್ದಾರೆ.

ಘಟನೆ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries