ಬದಿಯಡ್ಕ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ವಾಹನದಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಆಕ್ರಮಣವನ್ನು ಪ್ರತಿಭಟಿಸುವ ಸಲುªಭಿಂದು(ನ.25) ಬೆಳಗ್ಗೆ 11 ಕ್ಕೆ ಶ್ರೀ ಎಡನೀರು ಮಠದಲ್ಲಿ ಸಂತರ ಸಭೆ ನಡೆಯಲಿದೆ. ಅಖಿಲ ಭಾರತ ಸಂತ ಸಮಿತಿ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜರಗಲಿರುವ ಸಭೆಯಲ್ಲಿ ನಾಡಿನ ಯತಿಶ್ರೇಷ್ಠರು ಪಾಲ್ಗೊಳ್ಳಲಿದ್ದಾರೆ. ಘಟನೆಗೆ ಕಾರಣವಾದ ಆರೋಪಿಗಳನ್ನು ಬಂಧಿಸಿ ಅವರಿಗೆ ತಕ್ಕುದಾದ ಶಿಕ್ಷೆಯನ್ನು ನೀಡಬೇಕು, ಸಂತ ಸಮಾಜದ ರಕ್ಷಣೆಗೆ ಸರಕಾರವು ವಿಶೇಷ ಮುತುವರ್ಜಿ ವಹಿಸಬೇಕು ಮುಂತಾದ ಬೇಡಿಕೆಗಳೊಂದಿಗೆ ಸಭೆ ನಡೆಯಲಿದೆ.