HEALTH TIPS

ಅದಾನಿ ಪ್ರಕರಣ ಚರ್ಚೆಗೆ ವಿಪಕ್ಷಗಳ ಪಟ್ಟು: ನ. 27ಕ್ಕೆ ರಾಜ್ಯಸಭಾ ಕಲಾಪ ಮುಂದೂಡಿಕೆ

ನವದೆಹಲಿ: ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿರುವ ಅಮೆರಿಕ ನ್ಯಾಯಾಲಯದ ಪ್ರಕರಣ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷ ಕಾಂಗ್ರೆಸ್‌ ಪಟ್ಟು ಹಿಡಿದಿದ್ದರಿಂದ, ರಾಜ್ಯಸಭಾ ಕಲಾಪವನ್ನು ಬುಧವಾರದವರೆಗೆ (ನ.27) ಮುಂದೂಡಲಾಯಿತು.

1949ರಲ್ಲಿ ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿದ 75ನೇ ವರ್ಷಾಚರಣೆಯ ಅಂಗವಾಗಿ ಮಂಗಳವಾರ ಕಲಾಪ ನಡೆಯದು. ಹೀಗಾಗಿ ಕಲಾಪ ಬುಧವಾರ ಮುಂದುವರಿಯಲಿದೆ.

ರೂಲ್‌ 267ರ ಅಡಿಯಲ್ಲಿ ಸಲ್ಲಿಕೆಯಾದ ಒಟ್ಟು 13 ನೋಟಿಸ್‌ಗಳನ್ನು ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಅವರು ಮಾನ್ಯ ಮಾಡಲಿಲ್ಲ. ಇದರಲ್ಲಿ ಅದಾನಿ ವಿರುದ್ಧ ಕೇಳಿ ಬಂದಿರುವ 26.5 ಕೋಟಿ ಅಮೆರಿಕನ್ ಡಾಲರ್ ಲಂಚ ಪ್ರಕರಣ ಕುರಿತು ಏಳು ಅರ್ಜಿಗಳಿದ್ದವು. ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಕಲಾಪವನ್ನು 15 ನಿಮಿಷ ಮುಂದೂಡಲು ಆಗ್ರಹಿಸಿದವು.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 'ವಿಷಯವನ್ನು ಪಟ್ಟಿಗೆ ಸೇರಿಸಿದರೆ, ಒಂದು ಪ್ರಮುಖ ವಿಷಯವು ದೇಶದ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎಂಬುದನ್ನು ತಿಳಿಸಲು ಸಾಧ್ಯವಾಗಲಿದೆ. ಜಾಗತಿಕವಾಗಿ ಭಾರತದ ಪ್ರತಿಷ್ಠೆ ದೂಳಿಪಟವಾಗುತ್ತಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ ಅವರ ಬೆಂಬಲಕ್ಕೆ ನಿಂತಿದ್ದಾರೆ' ಎಂದು ಆರೋಪಿಸಿದರು.

ಆದರೆ ಖರ್ಗೆ ಅವರ ಮಾತನ್ನು ಕಡತಕ್ಕೆ ಸೇರಿಸದಂತೆ ಧನಕರ್‌ ಆದೇಶಿಸಿದರು. ವಿರೋಧ ಪಕ್ಷಗಳ ಒತ್ತಾಯದಂತೆ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು.

ಬೆಳಿಗ್ಗೆ 11.45ಕ್ಕೆ ಮತ್ತೆ ಕಲಾಪ ಆರಂಭವಾದಾಗ, 'ಸದಸ್ಯರ ಮೇಲೆ ಅಪಾರ ಗೌರವವಿದ್ದು, ಕಲಾಪವನ್ನು ಸುಗಮವಾಗಿ ಮುಂದುವರಿಸಲು ಅನುಕೂಲ ಮಾಡಿಕೊಡಬೇಕು' ಎಂದು ಸದಸ್ಯರಲ್ಲಿ ಧನಕರ್ ಕೋರಿದರು. ಹೀಗಿದ್ದರೂ ಕೆಲವು ಸದಸ್ಯರು ಚರ್ಚೆಗೆ ಅವಕಾಶ ನೀಡಲು ಒತ್ತಾಯಿಸಿದರು. ಹೀಗಾಗಿ, ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಅದಾನಿ ವಿಷಯದ ಜತೆಗೆ, ಮಣಿಪುರ ಹಿಂಸಾಚಾರ, ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಗುಂಪು ಘರ್ಷಣೆ ಮತ್ತು ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ನೆರೆ ಹಾಗೂ ಗುಡ್ಡ ಕುಸಿತ ಘಟನೆಗಳ ಕುರಿತ ಚರ್ಚೆಗೂ ರೂಲ್ 267ರಡಿಯಲ್ಲಿ ಮನವಿ ಸಲ್ಲಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad

ಜಾಹಿರಾತು

Qries