ಕಾಸರಗೋಡು: ಮೇಲ್ಪರಂಬ ಸನಿಹದ ತೆಕ್ಕಿಲ್ ಉಕ್ರಂಪಾಡಿಯಲ್ಲಿ ಹಾಲುಕುಡಿಸಿ ಮಲಗಿಸಿದ್ದ 28ದಿನ ಪ್ರಾಯದ ಗಂಡುಮಗು ಸಾವಿಗೀಡಾಗಿದೆ. ಬದ್ರುದ್ದೀನ್-ಖದೀಜತ್‍ಅಫ್‍ಸೀನಾ ದಂಪತಿಯ ಈ ಹಸುಗೂಸು ಉಕ್ರಂಪಾಡಿಯ ಮನೆಯಲ್ಲಿ ಚಲನೆಯಿಲ್ಲದ ಸಥಿತಿಯಲ್ಲಿ ಕಂಡುಬಂದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಆಸ್ಪತ್ರೆಗೆ ಕರೆತರುವ ಮೂರು ತಾಸುಗಳ ಮೊದಲೇ ಮಗು ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಗುವಿಗೆ ತಾಯಿ ಎದೆಹಾಲು ನೀಡಿ ಮಲಗಿಸಿದ್ದು, ಗಂಟಲಲ್ಲಿ ಹಾಲು ಸಿಲುಕಿಕೊಂಡು ಸಾವು ಸಂಭವಿಸಿರಬೇಕೆಂದು ಆಸ್ಪತ್ರೆ ಪ್ರಾಥಮಿಕ ವರದಿ ತಿಳಿಸಿದೆ. ಈ ಬಗ್ಗೆ ಫೋರೆನ್ಸಿಕ್ ವರದಿ ಲಭಿಸಿದ ನಂತರ ಕಾರಣ ತಿಳಿಯಲಿದೆ. ಮಗುವಿನ ಅಸಹಜ ಸಾವಿನ ಬಗ್ಗೆ ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.