ಚಂಡೀಗಢ: ಪಂಜಾಬ್‌ನ ಅಮೃತಸರದ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಬಳಿ ಎರಡು ಡ್ರೋನ್‌ಗಳು ಮತ್ತು ಹೆರಾಯಿನ್ ಪೊಟ್ಟಣ ಪತ್ತೆಯಾಗಿದೆ ಎಂದು ಬಿಎಸ್‌ಎಫ್ ವಕ್ತಾರರು ಭಾನುವಾರ ತಿಳಿಸಿದ್ದಾರೆ.
ಗಡಿ ಭದ್ರತಾ ಪಡೆಗಳು (ಬಿಎಸ್‌ಎಫ್) ಶನಿವಾರ ಮಧ್ಯಾಹ್ನ ಗಸ್ತು ತಿರುಗುತ್ತಿದ್ದ ವೇಳೆ ದಾವೊಕೆ ಗ್ರಾಮದ ಬಳಿಯ ಜಮೀನಿನಲ್ಲಿ 570 ಗ್ರಾಂ ಹೆರಾಯಿನ್ ಹೊಂದಿರುವ ಪೊಟ್ಟಣ ಜೊತೆಗೆ ಒಂದು ಡ್ರೋನ್ ಪತ್ತೆಯಾಗಿದೆ.
ಅಲ್ಲದೇ ಮಹಾವಾ ಗ್ರಾಮದ ಬಳಿ ಮತ್ತೊಂದು ಡ್ರೋನ್ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.