ತಿರುವನಂತಪುರಂ: ರಾಜ್ಯದಲ್ಲಿ ಆದ್ಯತಾ ವರ್ಗದ ಪಡಿತರ ಚೀಟಿಗಳನ್ನು ಮಸ್ಟರಿಂಗ್ ಮಾಡುವ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ವರ್ಗಕ್ಕೆ ಸೇರಿದವರು ನವೆಂಬರ್ 30ರವರೆಗೆ ಮಸ್ಟರಿಂಗ್ ಮಾಡಬಹುದು.
ಅತಿ ಹೆಚ್ಚು ಮಸ್ಟರಿಂಗ್ ಪೂರ್ಣಗೊಂಡಿರುವ ದೇಶದ ಮೂರನೇ ರಾಜ್ಯ ಕೇರಳ. ಆಹಾರ ಇಲಾಖೆ ಸಚಿವ ಜಿ.ಆರ್.ಅನಿಲ್ ಮಾತನಾಡಿ, ಆ್ಯಪ್ ಮೂಲಕ ಮಸ್ಟರಿಂಗ್ ಮಾಡುತ್ತಿರುವ ದೇಶದ ಮೊದಲ ರಾಜ್ಯ ಕೇರಳವಾಗಿದ್ದು, ಶೇ.100ರಷ್ಟು ಮಸ್ಟರಿಂಗ್ ಆಗುವ ವಿಶ್ವಾಸವಿದೆ ಎಂದಿರುವರು.
ರಾಜ್ಯದಲ್ಲಿ ಈಗಾಗಲೇ 1,29,49,049 ಮಂದಿ ಮಸ್ಟರಿಂಗ್ ಪೂರ್ಣಗೊಳಿಸಿದ್ದಾರೆ. ಪಿಎಚ್‍ಎಚ್ ವಿಭಾಗದಲ್ಲಿ 1,33,92,566 ಮತ್ತು ಎಎವೈ ಕಾರ್ಡ್‍ನಲ್ಲಿ 16,75,685 ಸದಸ್ಯರನ್ನು ಒಟ್ಟುಗೂಡಿಸಲಾಗಿದೆ. ಪ್ರಸ್ತುತ ಶೇ.84.21ರಷ್ಟು ಮಂದಿ ಮಸ್ಟರಿಂಗ್ ಪೂರ್ಣಗೊಳಿಸಿದ್ದಾರೆ.