ಭಾರತೀಯ ನೌಕಾಪಡೆಗೆ ನಿನ್ನೆ ಐತಿಹಾಸಿಕ ದಿನವಾಗಿದೆ. ಭಾರತೀಯ ನೌಕಾಪಡೆಯು ಇತ್ತೀಚೆಗೆ ತನ್ನ ನೌಕಾಪಡೆಗೆ ಸೇರಿಸಲಾದ ಪರಮಾಣು ಸಬ್ಮೆರಿನ್ ಐಎನ್ಎಸ್ ಅರಿಘಾತ್ ನಿಂದ 3,500 ಕಿಮೀ ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. K-4 ಕ್ಷಿಪಣಿಯ ಯಶಸ್ವಿ ಪರೀಕ್ಷೆಯು ಭಾರತದ ಎರಡನೇ ಸ್ಟ್ರೈಕ್ ಸಾಮರ್ಥ್ಯವನ್ನು ಸಾಬೀತುಪಡಿಸುತ್ತದೆ.
ಭಾರತೀಯ ನೌಕಾಪಡೆಯು ತನ್ನ ಶಸ್ತ್ರಾಗಾರದಲ್ಲಿ ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ. INS ಅರಿಹಂತ್ ಮತ್ತು ಅರಿಘಾತ್, ಇದು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಆಗಸ್ಟ್‌ನಲ್ಲಿ ವಿಶಾಖಪಟ್ಟಣದಲ್ಲಿರುವ ಹಡಗು ನಿರ್ಮಾಣ ಕೇಂದ್ರದಲ್ಲಿ ಅರಿಘಾತ್ ಅನ್ನು ಸೇರಿಸಲಾಗಿತ್ತು. ಇನ್ನು ಮೂರನೇ ಜಲಾಂತರ್ಗಾಮಿ ನೌಕೆಯ ನಿರ್ಮಾಣ ಆರಂಭವಾಗಿದ್ದು ಮುಂದಿನ ವರ್ಷ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.
ಈ ಜಲಾಂತರ್ಗಾಮಿ ನೌಕೆಗಳ ಮೂಲಕ ಶತ್ರು ರಾಷ್ಟ್ರಗಳ ಮೇಲೆ ಪರಮಾಣು ಕ್ಷಿಪಣಿಗಳನ್ನು ಹಾರಿಸಬಹುದು. 2009ರಲ್ಲಿ ಮೊದಲ ಬಾರಿಗೆ ಐಎನ್ಎಸ್ ಅರಿಹಂತ್ ಅನ್ನು ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಪ್ರದರ್ಶಿಸಲಾಗಿದ್ದು ನಂತರ 2016ರಲ್ಲಿ ನೌಕಾಪಡೆಗೆ ಸೇರಿಸಲಾಯಿತು. ಭಾರತೀಯ ನೌಕಾಪಡೆಯು ಮುಂದಿನ 5 ವರ್ಷಗಳಲ್ಲಿ ಇನ್ನೂ ಎರಡು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಿದೆ.