ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ನವೀಕರಣ ಪುನ: ಪ್ರತಿμÁ್ಠ ಅಷ್ಟಬಂಧ ಬ್ರಹ್ಮಕಲಶಾಭಿμÉೀಕವು 2025ರ ಫೆಬ್ರವರಿ 2ರಿಂದ 10ರ ತನಕವೂ, ವμರ್Áವಧಿ ಉತ್ಸವವು ಫೆಬ್ರವರಿ11ರಿಂದ 16ರ ತನಕ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಕಾರ್ಮಿಕತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನ.3ರಂದು ಬೆಳಗ್ಗೆ 10.30ಕ್ಕೆ ಶ್ರೀ ಕ್ಷೇತ್ರದಲ್ಲಿ ಬಲಿವಾಡು ಕೂಟದೊಂದಿಗೆ ನಡೆಯಲಿರುವುದು.
ಆಮಂತ್ರಣ ಪತ್ರಿಕೆಯನ್ನು ಕೊಲ್ಯಶ್ರೀ ಮೂಕಾಂಬಿಕಾ ಕ್ಷೇತ್ರದ ಅಧ್ಯಕ್ಷ ಮಧುಸೂದನ್ ಆಯರ್ ಬಿಡುಗಡೆಗೊಳಿಸುವರು. ಬ್ರಹ್ಮಕಲಶಾಭಿμÉೀಕ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಆಶೀರ್ವಚನ ನೀಡುವರು. ಅಭ್ಯಾಗತರಾಗಿ ರಘುನಾಥ ಶೆಣೈ ಕುಂಬಳೆ, ಮಂಜುನಾಥ ಕಾಮತ್ ಕಾಸರಗೋಡು, ನಾರಾಯಣ ಕಾಟುಕುಕ್ಕೆ, ಕಲ್ಲಗ ಚಂದ್ರಶೇಖರ ರಾವ್, ಗೋಪಾಲಕೃಷ್ಣ ಪೈ, ಶ್ರೀಧರ ಶೆಟ್ಟಿ, ಶಿವಶಂಕರ ನೆಕ್ರಾಜೆ, ಪಿ.ಎಂ.ಕೆ. ಕಬಕ ಭಾಗವಹಿಸುವರು.
ಶ್ರೀ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ, ಬ್ರಹ್ಮಕಲಶಾಭಿμÉೀಕ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ಟರ್ ನಾರಂಪಾಡಿ, ಕಾರ್ಯದರ್ಶಿ ಕೃಷ್ಣಮೂರ್ತಿ ಎಡಪ್ಪಾಡಿ, ಕೋಶಾಧಿಕಾರಿ ಸೀತಾರಾಮ ಕುಂಜತ್ತಾಯ, ವೆಂಕಟ್ರಮಣ ಭಟ್ ನಾರಂಪಾಡಿ ಮತ್ತಿತರರು ಭಾಗವಹಿಸುವರು.