ಕೋಲ್ಕತ್ತ: ಸಿಕಂದರಾಬಾದ್-ಶಾಲಿಮರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಶನಿವಾರ ಬೆಳಿಗ್ಗೆ ಪಶ್ಚಿಮ ಬಂಗಾಳದ ಹೌರಾ ಸಮೀಪ ಹಳಿ ತಪ್ಪಿವೆ ಎಂದು ಆಗ್ನೇಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋಲ್ಕತ್ತ: ಸಿಕಂದರಾಬಾದ್-ಶಾಲಿಮರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಶನಿವಾರ ಬೆಳಿಗ್ಗೆ ಪಶ್ಚಿಮ ಬಂಗಾಳದ ಹೌರಾ ಸಮೀಪ ಹಳಿ ತಪ್ಪಿವೆ ಎಂದು ಆಗ್ನೇಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾನೆ ಸುಮಾರು 5.30ರ ವೇಳೆಗೆ ಈ ಘಟನೆ ನಡೆದಿದೆ.
'ಕೋಲ್ಕತ್ತದಿಂದ 40 ಕಿ.ಮಿ ದೂರದಲ್ಲಿರುವ ನಲ್‌ಪುರದಲ್ಲಿ ಸಾಪ್ತಾಹಿಕ ವಿಶೇಷ ರೈಲು ಹಳಿತಪ್ಪಿದೆ. ಈವರೆಗೆ ಯಾವುದೇ ಸಾವು-ನೋವಿನ ವರದಿಯಾಗಿಲ್ಲ' ಎಂದು ಅವರು ಹೇಳಿದ್ದಾರೆ.
ಹಳಿ ತಪ್ಪಿದ ಬೋಗಿಗಳಲ್ಲಿ ಪಾರ್ಸೆಲ್ ವ್ಯಾನ್ (ಪಾರ್ಸೆಲ್‌ಗಳನ್ನು ಸಾಗಿಸುವ ಬೋಗಿ) ಕೂಡ ಸೇರಿದೆ.
'ರೈಲು ಸಂಖ್ಯೆ 22850 ಸಿಕಂದರಾಬಾದ್-ಶಾಲಿಮರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಖರಗಪುರ ವಲಯದ ನಲ್‌ಪುರ ನಿಲ್ದಾಣದ ಸಮೀಪದ ಹಳಿತಪ್ಪಿದೆ' ಎಂದು ಅವರು ಹೇಳಿದ್ದಾರೆ.
'ಘಟನೆಯ ಮಾಹಿತಿ ಬಂದ ಕೂಡಲೇ, ಸಂತ್ರಗಚಿ ಹಾಗೂ ಖರಗಪುರದಿಂದ ಅಪಘಾತ ಪರಿಹಾರ ರೈಲು ಹಾಗೂ ವೈದ್ಯಕೀಯ ನೆರವು ರೈಲನ್ನು ಕೂಡಲೇ ಕಳುಹಿಸಲಾಗಿದೆ. ಪ್ರಯಾಣಿಕರ ಸಹಾಯಕ್ಕೆ ಬಸ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.