ಕಾಸರಗೋಡು: ಪೆರಿಯ ಗೋಕುಲಂ ಗೋಶಾಲೆಯಲ್ಲಿ 4ನೇ ವರ್ಷದ ದೀಪಾವಳಿ ಸಂಗೀತೋತ್ಸವ ಶುಕ್ರವಾರ ಆರಂಭವಾಯಿತು. ಬೆಳಗ್ಗೆ ರವೀಶ ತಂತ್ರಿ ಕುಂಟಾರು ಇವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ನೂತನ ಗೋಶಾಲೆಯ `ಕಾಮಧೇನು' ಉದ್ಘಾಟಿಸಲಾಯಿತು. ನಂತರ ಗೋಪೂಜೆಯನ್ನು ನಡೆಸಿ ಸಂಗೀತೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ಪಟ್ಟಾಭಿರಾಮ ಪಂಡಿತ್ ಕೃಷ್ಣೇಂದ್ರ ವಾಡೇಕ್ಕರ್ ಅವರಿಂದ ಕರ್ನಾಟಕ ಹಿಂದುಸ್ಥಾನಿ ಜುಗುಲ್ ಬಂದಿ ನಡೆಯಿತು. ಗೋಕುಲಂ ಗೋಶಾಲೆಯ ವಿಷ್ಣು ಪ್ರಸಾದ್ ಹೆಬ್ಬಾರ್ ರಚಿಸಿದ ನಂದಿ ಮಂಟಪ ಕಾಮಧೇನು ಸಹಿತ ಎಂದು ಆರಂಭವಾಗುವ ಶ್ಲೋಕವನ್ನು ಪ್ರಸ್ತುತಪಡಿಸಿದರು.