ಕುಂಬಳೆ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್‍ನ 40ನೇ ಕಾಸರಗೋಡು ಜಿಲ್ಲಾ ಸಮ್ಮೇಳನವು ಕುಂಬಳೆ ಗೋಪಾಲಕೃಷ್ಣ ಸಭಾ ಭವನದಲ್ಲಿ ಶುಕ್ರವಾರ ಜರಗಿತು. ಎಕೆಪಿಎ ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ಧ್ವಜಾರೋಹಣಗೈದು ಚಾಲನೆ ನೀಡಿದರು. ನಂತರ ಎಕೆಪಿಎ ಮಹಿಳಾ ಸದಸ್ಯರಿಂದ ತಿರುವಾದಿರ ಪ್ರದರ್ಶನಗೊಂಡಿತು.
ಸಭಾ ಕಾರ್ಯಕ್ರಮವನ್ನು ಮಲಯಾಳಂ ಸಾಹಿತಿ ಅಂಬಿಕಾಸುತನ್ ಮಾಂಗಾಡ್ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮನದಲ್ಲಿ ಸಂತೋಷವನ್ನು ಕಾಣುವಂತೆ ಮಾಡುವಲ್ಲಿ ಛಾಯಾಗ್ರಹಣವು ಕಾರಣವಾಗಿದೆ. ಒಂದು ಚಿತ್ರವು ಗತಕಾಲದ ನೆನಪನ್ನು ಸದಾ ಹಸಿರಾಗಿರಿಸುತ್ತದೆ. ಬರಹಗಾರನು ತನ್ನ ಅನಿಸಿಕೆಯನ್ನು ಬರೆಯುವುದು ಸ್ವಾಭಾವಿಕ. ಆದರೆ ಛಾಯಾಗ್ರಹಣ ಎನ್ನುವುದು ಯತಾರ್ಥವಾದ ಚಿತ್ರಣವನ್ನೇ ನೀಡುವ ಕಲೆಯಾಗಿದೆ. ಎಂದರು.
ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ಎಕೆಪಿಎ ರಾಜ್ಯ ಅಧ್ಯಕ್ಷ ಎ.ಸಿ. ಜೋನ್ಸನ್ ಫೋಟೋಗ್ರಫಿ ಅವಾರ್ಡ್, ಸಾಧಕರಿಗೆ ಅಭಿನಂದನೆ ನಡೆಸಿಕೊಟ್ಟು ಮಾತನಾಡಿದರು. ರಾಜ್ಯ ಕೋಶಾಧಿಕಾರಿ ಉಣ್ಣಿ ಕೂವೋಡ್, ರಾಜ್ಯ ಸಾಂತ್ವನಮ್ ಸಂಚಾಲಕ ಸಜೀಶ್ ಮಣಿ, ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ರಾಜ್ಯ ಸಮಿತಿ ಸದಸ್ಯ ಪ್ರಶಾಂತ್ ಕೆ.ವಿ., ಜಿಲ್ಲಾ ಉಪಾಧ್ಯಕ್ಷರುಗಳಾದ ಶರೀಫ್, ವೇಣು ವಿವಿ ಕುಂಬಳೆ, ಜಿಲ್ಲಾ ಜೊತೆಕಾರ್ಯದರ್ಶಿ ಪ್ರಜಿತ್ ಎನ್.ಕೆ., ಪಿಆರ್‍ಒ ಅನೂಪ್ ಚಂದೇರ, ಜಿಲ್ಲಾ ವೆಲ್ಫೇರ್ ಸಮಿತಿ ಸುಧೀರ್ ಕೆ., ಮಹಿಳಾ ವಿಂಗ್‍ನ ರಮ್ಯಾ ರಾಜೀವನ್, ನೇಚರ್ ಕ್ಲಬ್ ಸಂಚಾಲಕ ದಿನೇಶ್ ಇನ್ ಸೈಟ್, ಇನ್ಶೂರೆನ್ಸ್ ಸಂಚಾಲಕ ಅಶೋಕನ್ ಪೊಯಿನಾಚಿ, ಬ್ಲಡ್ ಡೊನೇಶನ್ ಕ್ಲಬ್ ಸಂಚಾಲಕ ಸನ್ನಿ ಜೇಕಬ್, ಸ್ಪೋಟ್ಸ್ ಕ್ಲಬ್ ಸಂಚಾಲಕ ಸುಕುಸ್ಮಾರ್ಟ್. ಜಿಲ್ಲಾ ಆಟ್ರ್ಸ್ ಕ್ಲಬ್ ಸಂಚಾಲಕ ವಿಜಯನ್ ಶೃಂಗಾರ್ ಉಪ್ಪಳ, ವಿವಿಧ ವಲಯ ಅಧ್ಯಕ್ಷರುಗಳಾದ ಅಪ್ಪಣ್ಣ ಸೀತಾಂಗೋಳಿ, ವಾಸು ಎ. ಕಾಸರಗೋಡು, ಸಂತೋಷ್, ಅನಿಲ್, ಜನಾರ್ದನನ್ ಸಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಜೊತೆ ಕಾರ್ಯದರ್ಶಿ ರಾಜೇಂದ್ರನ್ ವಿ.ಎನ್. ಸ್ವಾಗತಿಸಿ, ಕೋಶಾಧಿಕಾರಿ ಸುನಿಲ್ ಕುಮಾರ್ ಪಿ.ಟಿ.ವಂದಿಸಿದರು.
* ಮಧ್ಯಾಹ್ನ ಸಭಾ ಕಾರ್ಯಕ್ರಮದ ನಂತರ ಸದಸ್ಯರಿಂದ ಕುಂಬಳೆ ಪೇಟೆಯಲ್ಲಿ ಮೆರವಣಿಗೆ ನಡೆಯಿತು.
* ಚೆಂಡೆಮೇಳ, ಮುತ್ತುಕೊಡೆಗಳೊಂದಿಗೆ ಮೆರವಣಿಗೆ ಆಕರ್ಷಣೀಯವಾಯಿತು.
* ಛಾಯಾಚಿತ್ರ ಪ್ರದರ್ಶನ, ಟ್ರೇಡ್ ಫೇರ್ ಗಮನಸೆಳೆಯಿತು.
* ಅಪರಾಹ್ನ ಪ್ರತಿನಿಧಿ ಸಮ್ಮೇಳನ ನಡೆಯಿತು.