ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು(ಎಕ್ಯೂಐ) ಶನಿವಾರ ಬೆಳಿಗ್ಗೆ 420ಕ್ಕೂ ಹೆಚ್ಚಿದ್ದು, 'ಅಪಾಯದ ಸ್ಥಿತಿ' ಮುಂದುವರಿದಿದೆ. ಕನಿಷ್ಠ ತಾಪಮಾನ 11.4 ಡಿ.ಸೆ. ದಾಖಲಾಗಿದೆ.
38 ನಿಗಾ ಕೇಂದ್ರಗಳ ಪೈಕಿ 9 ಕೇಂದ್ರಗಳಲ್ಲಿ ಎಕ್ಯೂಐ 450ಕ್ಕೂ ಹೆಚ್ಚಿದ್ದು, 'ತೀವ್ರ ಅಪಾಯ'ದ ಸ್ಥಿತಿ ಇದೆ.