ಬದಿಯಡ್ಕ: ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನ ಮಂದಿರದ 43ನೇ ವಾರ್ಷಿಕೋತ್ಸವವು ನ.20 ಬುಧವಾರದಿಂದ ನ.22 ಶುಕ್ರವಾರದ ತನಕ ವಿವಿಧ ವೈಧಿಕ-ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಕಾರ್ಯಕ್ರಮಗಳು :
ನ.20 ಬುಧವಾರ ಪ್ರಾತಃಕಾಲ 6ಗಂಟೆಗೆ ದೀಪೋಜ್ವಲನ, ಮಹಾಗಣಪತಿ ಹೋಮ, 6.30ಕ್ಕೆ ಮುದ್ರಾಧಾರಣೆ, 7ರಿಂದ ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಸಂಘದವರಿಂದ ಭಜನೆ ಆರಂಭ, ನಂತರ ವಿವಿಧ ಭಜನಾ ಸಂಘಗಳಿಂದ ಭಜನೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ. ಅಪರಾಹ್ನ 2.30ರಿಂದ ಭಜನೆ, ರಾತ್ರಿ 8 ಗಂಟೆಗೆ ಸತ್ಯನಾರಾಯಣ ಪೂಜೆ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 8.30ರಿಂದ 11.30ರ ತನಕ ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ನಾಟ್ಯ ವೈವಿಧ್ಯ,. ರಾತ್ರಿ ಅನ್ನದಾನ ನಡೆಯಲಿದೆ.
ನ.21 ಗುರುವಾರ ಪ್ರಾತಃಕಾಲ 5 ಗಂಟೆಗೆ ಶರಣಂ ವಿಳಿ, ಭಜನೆ, 11 ಗಂಟೆಗೆ ಧಾರ್ಮಿಕ ಸಭೆ. ಶ್ರೀ ಮಂದಿರದ ಸೇವಾಸಮಿತಿ ಅಧ್ಯಕ್ಷ ವಿಶ್ವನಾಥನ್ ಬಳ್ಳಪದವು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮ ಶ್ರೀ ಈಶವಿಠಲದಾಸ ಸ್ವಾಮೀಜಿ ಅವರಿಂದ ಆಶೀರ್ವಚನ. ನವಜೀವನ ಶಾಲಾ ಅಧ್ಯಾಪಕ ಪ್ರಸಾದ್ ಮಾಸ್ತರ್ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಹಿರಿಯ ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ, ಕೃಷಿಕ ಸಾಮಾಜಿಕ ಕಾರ್ಯಕರ್ತ ಡಾ. ವೇಣುಗೋಪಾಲ ಕಳೆಯತ್ತೋಡಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳುವರು. ದೇವಪ್ಪ ನಾಯ್ಕ ಪಿಲಿಕೂಡ್ಲು, ಲಕ್ಷ್ಮೀ ದ್ವಾರಕಾನಗರ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಅಪರಾಹ್ನ ವಿವಿಧ ಭಜನಾ ಸಂಘಗಳಿಂದ ಭಜನೆ, 3.30ಕ್ಕೆ ಯಕ್ಷ ಕುಣಿತ ಭಜನೆ, ಸಂಜೆ 5ರಿಂದ ತಾಯಂಬಕಂ ನಡೆಯಲಿದೆ. ಸಂಜೆ 6.30ಕ್ಕೆ ಉಲ್ಪೆ ಮೆರವಣಿಗೆ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಿಂದ ಆರಂಭ, ತಾಂಬೋಲ ಪ್ರದರ್ಶನ, ಸಂಚಾರಿ ಭಜನೆ, ಕುಣಿತ ಭಜನೆ, ಸಿಂಗಾರಿ ಮೇಳದೊಂದಿಗೆ ವೈಭÀವದ ಮೆರವಣಿಗೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ 9.30ರ ತನಕ ಗಡಿನಾಡ ಗಂಧರ್ವ ಗಾಯನ ಪ್ರಶಸ್ತಿ ವಿಜೇತೆ ಕುಮಾರಿ ವಿದ್ಯಾಲಕ್ಷ್ಮಿ ಮೈಲ್ತೊಟ್ಟಿ, ಕಿರಣ್ ಕುಮಾರ್ ಕಾಸರಗೋಡು ಮತ್ತು ಬಳಗದವರಿಂದ ಭಕ್ತಿ ಗಾನಾಮೃತಂ. 9.30ಕ್ಕೆ ಮಹಾಪೂಜೆ ಪ್ರಸಾದವಿತರಣೆ, 10ರಿಂದ ಅನ್ನದಾನ. ರಾತ್ರಿ 10.30ರಿಂದ ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮೀ ಯಕ್ಷಗಾನ ಕಲಾಸಂಘ ಮಾವಿನಕಟ್ಟೆ ಮತ್ತು ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ವೀರಮಣಿ ಲವಕುಶ ಯಕ್ಷಗಾನ ಬಯಲಾಟ ನಡೆಯಲಿದೆ. ನ.22 ಶುಕ್ರವಾರ ಪ್ರಾತಃಕಾಲ ಶರಣಂ ವಿಳಿ, ದೀಪೋದ್ವಾಸನದೊಂದಿಗೆ ಕಾರ್ಯಕ್ರಮಗಳು ಸಂಪನ್ನವಾಗಲಿದೆ.