ಬದಿಯಡ್ಕ: ಶ್ರೀರಾಮ, ಕೃಷ್ಣನಂತಹ ಪುರಾಣ ಪುರುಷರು ನಮಗೆ ಆದರ್ಶಪ್ರಾಯರಾಗಿರಬೇಕು. ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯನ್ನು ಕಾಣುತ್ತಿದ್ದು, ಪ್ರತೀ ಕ್ಷೇತ್ರಗಳಲ್ಲೂ ಧರ್ಮಗ್ರಂಥಾಲಯಗಳಿರಬೇಕು ಎಂದು ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ನುಡಿದರು.
ಗುರುವಾರ ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂದಿರದ 43ನೇ ವಾರ್ಷಿಕೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಅವರು ಹರಸಿದರು.
ಸನಾತನ ಸಂಸ್ಕøತಿಗೆ ಪೂರಕವಾದ ಎಲ್ಲಾ ಪುಸ್ತಕಗಳೂ ನಮ್ಮ ದೇವಸ್ಥಾನಗಳಲ್ಲಿ ಭಗವದ್ಭಕ್ತರಿಗೆ ಲಭಿಸಬೇಕು. ನಮ್ಮ ಮಕ್ಕಳು ಭಾರತೀಯ ಸಂಸ್ಕøತಿಯನ್ನು ಅಳವಡಿಸಿಕೊಂಡು ಬೆಳೆಯಬೇಕು. ಸದಾ ಭಾವನಾತ್ಮಕ ಚಿಂತನೆಯು ನಮ್ಮನ್ನು ಎತ್ತರಕ್ಕೊಯ್ಯುತ್ತದೆ ಎಂದರು.
ಶ್ರೀಮಂದಿರದ ಸೇವಾಸಮಿತಿ ಅಧ್ಯಕ್ಷ ವಿಶ್ವನಾಥನ್ ಬಳ್ಳಪದವು ಅಧ್ಯಕ್ಷತೆ ವಹಿಸಿದ್ದರು. ನವಜೀವನ ಶಾಲಾ ಅಧ್ಯಾಪಕ ಪ್ರಸಾದ್ ಮಾಸ್ತರ್ ಧಾರ್ಮಿಕ ಭಾಷಣದಲ್ಲಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ. ಆದರೆ ಕೇವಲ ಒಂದು ಮತವಿಭಾಗದ ಜನರ ಓಲೈಕೆಗಾಗಿ ಹಿಂದುಗಳ ಅಡಿಪಾಯಕ್ಕೇ ಧಕ್ಕೆ ತರುವ ಕಾರ್ಯಕ್ಕೆ ಕೆಲವೊಂದು ರಾಜಕಾರಣಿಗಳು ಬೆಂಬಲವಾಗಿ ನಿಲ್ಲುತ್ತಿರುವುದು ಆತಂಕದ ವಿಚಾರವಾಗಿದೆ. ಇಂತಹ ಸಂದರ್ಭÀಲ್ಲಿ ಮಠ ಮಂದಿರಗಳ ಮೂಲಕ ಹಿಂದುಗಳು ಬಲಿಷ್ಠರಾಗುತ್ತಿದ್ದಾರೆ. ಭಾರತೀಯ ಸಂಸ್ಕøತಿಯ ವಿಶ್ವಕ್ಕೇ ತಾಯಿಯಾಗಿದೆ. ಜಾತಿ ತಾರತಮ್ಯವನ್ನು ಬದಿಗೊತ್ತಿ ನಾವೆಲ್ಲ ಹಿಂದು ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲರೂ ಒಂದಾಗಬೇಕು ಎಂದರು.
ಹಿರಿಯ ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ, ಕೃಷಿಕ, ಸಾಮಾಜಿಕ ಕಾರ್ಯಕರ್ತ ಡಾ. ವೇಣುಗೋಪಾಲ ಕಳೆಯತ್ತೋಡಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡಿದ್ದರು. ಹಿರಿಯರಾದ ದೇವಪ್ಪ ನಾಯ್ಕ ಪಿಲಿಕೂಡ್ಲು, ಲಕ್ಷ್ಮೀ ದ್ವಾರಕಾನಗರ ಇವರಿಗೆ ಗೌರವಾರ್ಪಣೆ ನಡೆಯಿತು. ಶ್ರೀಕೃಷ್ಣಲೀಲಾ ಬಾಲಗೋಕುಲದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಿರ್ವಹಿಸಿದರು. ಶ್ರೀಮಂದಿರದ ಪ್ರಧಾನ ಕಾರ್ಯದರ್ಶಿ ಶಿವಾನಂದ ನಡುಮೂಲೆ ಸ್ವಾಗತಿಸಿ, ಕೋಶಾಧಿಕಾರಿ ಶಶಿಧರ ತೆಕ್ಕೆಮೂಲೆ ವಂದಿಸಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು.