ಕಾಸರಗೋಡು: ನೀಲೇಶ್ವರದಲ್ಲಿ ನಡೆದ ಸಿಡಿಮದ್ದು ದುರಂತದಲ್ಲಿ ಮೃತರಾದ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳಂತೆ ಪರಿಹಾರ ನೀಡಲು ರಾಜ್ಯ ಸರ್ಕಾರದ ಸಂಪುಟ ಸಭೆ ಅನುಮೋದನೆ ನೀಡಿದೆ. ಅವಘಡÀದಲ್ಲಿ ಇಲ್ಲಿಯವರೆಗೆ ನಾಲ್ವರು ಸಾವನ್ನಪ್ಪಿದ್ದಾರೆ. ಚೆರುವತ್ತೂರಿನಿಂದ ಶಿಬಿನ್ ರಾಜ್, ಕರಿಂತಲಂ ಕೊಲ್ಲಂಬರದಿಂದ ಕೆ. ಬಿಜು (38) ಹಾಗೂ ಚೋಯನಕೋಟ್ ಕಿನವೂರು ಮೂಲದ ಕೆ. ರತೀಶ್ (32) ಮತ್ತು ಸಂದೀಪ್ (38) ಮೃತರು.
100ಕ್ಕೂ ಹೆಚ್ಚು ಮಂದಿ ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, 30 ಮಂದಿ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿದ್ದಾರೆ.