HEALTH TIPS

ಉತ್ತರ ಪ್ರದೇಶ: ಬಾಲಕನ ಹೊಟ್ಟೆಯಲ್ಲಿತ್ತು 56 ಲೋಹದ ತುಣುಕುಗಳು!

       ಹಾಥರಸ್‌: ಉತ್ತರಪ್ರದೇಶದ ಹಾಥರಸ್‌ನಲ್ಲಿ 15 ವರ್ಷದ ಬಾಲಕನ ಹೊಟ್ಟೆಯಲ್ಲಿ ಬ್ಯಾಟರಿ, ಬ್ಲೇಡ್‌ ಸೇರಿದಂತೆ 56 ಲೋಹದ ವಸ್ತುಗಳು ಪತ್ತೆಯಾಗಿದೆ. ದೆಹಲಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿ‌ತ್ಸೆಗೆ ನಡೆಸಿ, ಎಲ್ಲ ವಸ್ತುಗಳನ್ನು ಹೊರತೆಗೆದ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದಿದ್ದಾನೆ.

       ಹಾಥರಸ್‌ನ ರತ್ನಗರ್ಭ ಕಾಲೊನಿ ನಿವಾಸಿ, ವೈದ್ಯಕೀಯ ಪ್ರತಿನಿಧಿ ಸಂಚಿತ್‌ ಶರ್ಮಾ ಅವರ ಮಗ 9 ನೇ ತರಗತಿ ಕಲಿಯುತ್ತಿದ್ದ ಆದಿತ್ಯ ಶರ್ಮಾ ಕೆಲದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಉಸಿರಾಡಲು ಕಷ್ಟವಾಗುತ್ತಿದೆ ಎಂದು ಹೆತ್ತವರಿಗೆ ತಿಳಿಸಿದ್ದರಿಂದ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು.

         ' ಹಾಥರಸ್‌ನ ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೇಳೆ ಜೈಪುರಕ್ಕೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು. ಅಲ್ಲಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಕೆಲದಿನ ಚಿಕಿತ್ಸೆ ಪಡೆದ ಬಳಿಕ ಮನೆಗೆ ಕರೆತಂದಿದ್ದರು. ಉಸಿರಾಟದ ಸಮಸ್ಯೆ ಮತ್ತೆ ಬಿಗಡಾಯಿಸಿದ್ದರಿಂದ ಅಲೀಗಢ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಅ.26ರಂದು ಆದಿತ್ಯನಿಗೆ ಅಲ್ಟ್ರಾಸೌಂಡ್‌ ಪರೀಕ್ಷೆ ನಡೆಸಿದ್ದ ವೇಳೆ ಹೊಟ್ಟೆಯಲ್ಲಿ 19 ಲೋಹದ ತುಣುಕುಗಳು ಇರುವುದನ್ನು ಪತ್ತೆಮಾಡಿದ್ದರು' ಎಂದು ‌ಸಂಚಿತ್‌ ವಿವರಿಸಿದರು.

     'ನಂತರ ನೋಯ್ಡಾದ ಅತ್ಯಾಧುನಿಕ ಆಸ್ಪತ್ರೆಯಲ್ಲಿ ಆತನಿಗೆ ಮತ್ತೆ ಪರೀಕ್ಷೆ ನಡೆಸುವಂತೆ ಸಲಹೆ ನೀಡಿದ್ದರು. ಅಲ್ಲಿಗೆ ಕರೆದೊಯ್ದು, ಪರೀಕ್ಷೆ ನಡೆಸಿದ ವೇಳೆ 56 ಲೋಹದ ತುಣುಕುಗಳು ದೇಹ ಸೇರಿರುವುದನ್ನು ವೈದ್ಯರು ಖಚಿತಪಡಿಸಿದ್ದರು. ಇದಾದ ಮರುದಿನವೇ ದೆಹಲಿಯ ಸಪ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಿದ್ದೆವು. ತಜ್ಞ ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿ, ತುಣುಕುಗಳನ್ನು ಹೊರಗೆ ತೆಗೆದಿದ್ದರು. ಇಷ್ಟೊಂದು ವಸ್ತುಗಳು ಹೊಟ್ಟೆ ಸೇರಿದ ಕುರಿತು ವೈದ್ಯರು ಸಹ ಆಘಾತಕ್ಕೊಳಗಾದರು' ಎಂದು ವಿವರಿಸಿದರು.

          ವಿಧಿ ಬರಹ ಬೇರೆಯೇ ಇತ್ತು: 'ನನ್ನ ಮಗನನ್ನು ಉಳಿಸಲು ವೈದ್ಯರು ಎಲ್ಲ ಪ್ರಯತ್ನಗ‌ಳನ್ನು ಮಾಡಿದ್ದಾರೆ. ವಿಧಿ ಬರಹ ನಮ್ಮ ಪರವಾಗಿ ಇರಲಿಲ್ಲ. ಶಸ್ತ್ರಚಿಕಿತ್ಸೆ ನಂತರ ಹೃದಯ ಬಡಿತವು ತೀವ್ರವಾಗಿ ಹೆಚ್ಚಾಗಿ, ರಕ್ತದೊತ್ತಡವು ಇಳಿಕೆ ದಾಖಲಿಸಿತು. ಕೊನೆಗೂ ಆತ ಬದುಕಿ ಉಳಿಯಲಿಲ್ಲ' ಎಂದು ಆದಿತ್ಯ ತಂದೆ ಸಂಚಿತ್‌ ಕಣ್ಣೀರಿಟ್ಟರು.

            ವೈದ್ಯರಿಗೂ, ಕುಟುಂಬಕ್ಕೂ ಅಚ್ಚರಿ: ಆದಿತ್ಯದ ದೇಹದ ಒಳಗೆ ದೊಡ್ಡ ಸಂಖ್ಯೆಯಲ್ಲಿ ಲೋಹದ ತುಣುಕುಗಳು ಸೇರಿದ್ದರೂ, ಬಾಯಿ, ಗಂಟಲಿನಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಲೋಹದ ವಸ್ತುಗಳನ್ನು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ತಿಂದಿದ್ದಾನೆಯೇ ಎಂದು ಕುಟುಂಬಸ್ಥರಿಗೂ ಗೊತ್ತಾಗಿಲ್ಲ.

              ಬಾಲಕನ ಸಾವಿನ ಕುರಿತು ಪ್ರತಿಕ್ರಿಯೆ ನೀಡಲು ಸಫ್ದರ್‌ಜಂಗ್‌ ಆಸ್ಪತ್ರೆಯ ವೈದ್ಯರು ನಿರಾಕರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries