ಜಯಕುಮಾರ್ ಜಾನ್ ಈ ಕಠಿಣ ಶಿಕ್ಷೆ ವಿಧಿಸಿದ್ದಾರೆ. ನವೆಂಬರ್ 5ರಂದು, ಕೊಲೆ, ಚಿತ್ರಹಿಂಸೆ, ದೈಹಿಕ ಹಲ್ಲೆ, ಪೋಕ್ಸೊ ಮತ್ತು ಬಾಲಾಪರಾಧ ಕಾಯ್ದೆ ಸೇರಿದಂತೆ ಬಾಲಾಪರಾಧಿ ಕಾಯ್ದೆಯ 16 ಸೆಕ್ಷನ್‌ಗಳಲ್ಲಿ ಆರೋಪಿಯನ್ನು ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿ, ಮರಣದಂಡನೆ ಶಿಕ್ಷೆ (Death Sentence) ವಿಧಿಸಿರುವುದಾಗಿ ವರದಿಯಾಗಿದೆ.
ಅತ್ಯಾಚಾರ-ಕೊಲೆ
ಅಪರಾಧಿ ತಮಿಳುನಾಡು ಮೂಲದವನಾಗಿದ್ದು, ಕುಂಬಜಾದಲ್ಲಿ ಬಾಡಿಗೆ ಮನೆಯಲ್ಲಿ ದಂಪತಿಗಳು ವಾಸವಿದ್ದರು. ತನ್ನ ಹೆಂಡತಿಯ ಮೊದಲ ಮಗುವನ್ನು ಭೀಕರ ಹಾಗೂ ಬರ್ಬರವಾಗಿ ಮಲತಂದೆ ಅಲೆಕ್ಸ್ ಪಾಂಡಿಯನ್ ಹತ್ಯೆಗೈದಿದ್ದ. 2021ರ ಏಪ್ರಿಲ್ 5ರಂದು ಕುಂಬಳದ ಬಾಡಿಗೆ ಮನೆಯಲ್ಲಿ ಈ ಕೊಲೆ ನಡೆದಿತ್ತು. ಮಗುವಿನ ದೇಹದ ಮೇಲೆ 67 ಗಾಯಗಳಿರುವುದು ಮರಣೋತ್ತರ ಪರೀಕ್ಷೆಯ ವರದಿಯಿಂದ ಹೊರಬಿದ್ದಿತು. ಪೊಲೀಸರು ತಾವು ನೀಡಬೇಕಾದ ಚಾರ್ಚ್ಶೀಟ್ ಅನ್ನು ಜುಲೈ 5, 2021ರಂದು ಸಲ್ಲಿಸಿದರು. ತನಿಖೆಯಲ್ಲಿ ಆತ ತಮಿಳುನಾಡಿನಲ್ಲಿಯೂ ಮಗುವಿಗೆ ಕಿರುಕುಳ ನೀಡಿದ್ದಾನೆ ಎಂದು ಕಂಡುಬಂದಿದೆ. ಆರೋಪಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪವನ್ನು ಸಾಬೀತುಪಡಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ.
ಕೆಲಸಕ್ಕೆ ತೆರಳಿದ್ದ ಪತ್ನಿ
ಅಂದು ಮಗುವಿನ ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಲಕಿಯ ದೇಹದಲ್ಲಿ ಅನೇಕ ಗಾಯಗಳನ್ನು ನೋಡಿದ್ದರು. ಈ ಬಗ್ಗೆ ಪತಿಯ ಬಳಿ ಪ್ರಶ್ನೆ ಮಾಡಿದ್ದಕ್ಕೆ ಅಲೆಕ್ಸ್ ಆಕೆಗೂ ಮನಬಂದಂತೆ ಥಳಿಸಿದ್ದ. ಸ್ಥಳೀಯರ ನೆರವಿನಿಂದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕೂಡಲೇ ಪೊಲೀಸರು ಅಲೆಕ್ಸ್‌ನನ್ನು ವಶಕ್ಕೆ ತೆಗೆದುಕೊಂಡು, ತನಿಖೆ ನಡೆಸಿದ್ದರು. ಬಳಿಕ ಪ್ರಕರಣ ಕೊಲೆ ಎಂದು ತಿಳಿದುಬಂದಿತು.
ಆರೋಪಿ-ಅಪರಾಧಿ
ಆರೋಪಿ ಮಾದಕ ವ್ಯಸನಿಯಾಗಿರುವುದು ಕೂಡ ಪೊಲೀಸರು ಪತ್ತೆ ಹಚ್ಚಿದ್ದರು. ಆರೋಪಿ ಹಲವು ಬಾರಿ ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿದ್ದ ಪೊಲೀಸರು, ಕೋರ್ಟ್ಗೆ ತಾವು ದಾಖಲಿಸಿದ ಚಾರ್ಚ್ಶೀಟ್ ಅನ್ನು ನ್ಯಾಯಾಲಯಕ್ಕೆ ಒದಗಿಸಿದರು. ಇದನ್ನು ಗಮನಿಸಿದ ಕೋರ್ಟ್, ಆರೋಪಿ ಅಲೆಕ್ಸ್ ಪಾಂಡಿಯನ್ ಅಪರಾಧಿ ಎಂದು ಹೇಳಿ, ಇದೀಗ ಮರಣದಂಡನೆ ಶಿಕ್ಷೆಯನ್ನು ವಿಧಿಸುವ ಮುಖೇನ ಮಹತ್ವದ ತೀರ್ಪು ನೀಡಿದೆ.