ಬದಿಯಡ್ಕ: ಸರ್ಕಾರಿ ಕಲೇಜು ನಿವೃತ್ತ ಪ್ರಾಧ್ಯಾಪಕ, ಪೆÇ್ರ. ಪಿ.ಶ್ರೀಕೃಷ್ಣ ಭಟ್ ಅಭಿನಂದನ ಸಮಿತಿಯ ಮಹಾಸಭೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್‍ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಪೆÇ್ರ. ಪಿ.ಎನ್. ಮೂಡಿತ್ತಾಯ ಅದ್ಯಕ್ಷತೆ ವಹಿಸಿದ್ದರು. ಪೆÇ್ರ. ಪಿ. ಶ್ರೀಕೃಷ್ಣ ಭಟ್ ಅವರಿಗೆ ಅಭಿನಂದನಾ ಸಮಾರಂಭವನ್ನು ಡಿ. 5ರಂದು ನೀರ್ಚಾಲು ಶಾಲೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದ ಸ್ವರೂಪವನ್ನು ಕುರಿತು ಕಾರ್ಯಕ್ರಮ ಸಂಯೋಜನ ಸಮಿತಿ ಸಂಚಾಲಕ ಡಾ.ರಾಧಾಕೃಷ್ಣ ಬೆಳ್ಳೂರು ಹಾಗೂ ಅಭಿನಂದನ ಗ್ರಂಥದ ವಿನ್ಯಾಸದ ಕುರಿತು ಪ್ರಧಾನ ಸಂಪಾದಕಿ ಡಾ.ಯು.ಮಹೇಶ್ವರಿ ವಿವರಿಸಿದರು. ಅಭಿನಂದನ ಗ್ರಂಥಕ್ಕೆ 'ಶ್ರೀಪಥ' ಎಂಬ ಹೆಸರನ್ನು ನೀಡಲು ತೀರ್ಮಾನಿಸಲಾಯಿತು.
ಸಮಾರಂಭದ ಯಶಸ್ವಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಸ್ವಾಗತ ಸಮಿತಿಗೆ ಸಂಚಾಲಕರಾಗಿ ಡಾ.ಕೆ.ಸುಬ್ರಹ್ಮಣ್ಯ ಭಟ್, ಆಹಾರ ಸಮಿತಿಗೆ ಸಂಚಾಲಕರಾಗಿ ಡಾ. ಶಶಿರಾಜ ನೀಲಂಗಳ, ಪ್ರಚಾರ ಮತ್ತು ದಾಖಲೀಕರಣ ಸಮಿತಿಗೆ ಸಂಚಾಲಕರಾಗಿ ಉದಯ ಕಂಬಾರ್, ವೇದಿಕೆ ಸಮಿತಿಗೆ ಸಂಚಾಲಕರಾಗಿ ಡಾ.ಮಹಮ್ಮದಲಿ ಕೆ., ಪುಸ್ತಕ ಪ್ರದರ್ಶನ ಸಮಿತಿಗೆ ಸಂಚಾಲಕರಾಗಿ ಲಕ್ಷ್ಮಿ ಕೆ ಇವರನ್ನು ಆಯ್ಕೆ ಮಾಡಲಾಯಿತು.
ನೀರ್ಚಾಲು ಶಾಲೆಯ ಪ್ರಬಂಧಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಅಭಿನಂದನ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಧಾಕೃಷ್ಣ ಮುಳ್ಳೇರಿಯಾ ಸ್ವಾಗತಿಸಿ, ಆರ್ಥಿಕ ಸಮಿತಿ ಸಂಚಾಲಕ ವಿಶಾಲಾಕ್ಷ ಪುತ್ರಕಳ ವಂದಿಸಿದರು.