ನವದಹಲಿ ಮುಂಬರುವ ಸಂಸತ್‍ನೆ ಚಳಿಗಾಲ ಅಧಿವೇಶನದಲ್ಲಿ ಒಟ್ಟು 5 ಹೊಸ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಭದ್ರತೆ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಭಾರತದ ಹಡಗು ಹಾಗೂ ಭಾರತದ ಬಂದರುಗಳ ರಕ್ಷಣೆ ಮಸೂದೆ ಸೇರಿ ಒಟ್ಟು 5 ಹೊಸ ಮಸೂದೆಗಳು ಪಟ್ಟಿಯಲ್ಲಿ ಇವೆ
ಸದ್ಯ ಜಂಟಿ ಸಂಸದೀಯ ಸಮಿತಿಯ ವರದಿಯ ಬಳಿಕ ವ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಯೋಜನೆ ಕೇಂದ್ರ ಸರ್ಕಾರದು.
ಬಾಕಿ ಇರುವ 13 ಸೇರಿ ಒಟ್ಟು ಮಸೂದೆಗಳ ಪಟ್ಟಿಯನ್ನು ಲೋಪಸಭೆ ಹಾಗೂ ರಾಜ್ಯಸಭೆ ಸಚಿವಾಲಯಕ್ಕೆ ಕೇಂದ್ರ ಸರ್ಕಾರ ಸಲ್ಲಿಸಿದೆ. ಲೋಕಸಭೆಯಲ್ಲಿ 15 ಹಾಗೂ ರಾಜ್ಯಸಭೆಯಲ್ಲಿ 18 ಮಸೂದೆಗಳನ್ನು ಮಂಡಿಸುವ ಪ್ರಸ್ತಾಪ ಇದೆ.
ಕರಾವಳಿ ವ್ಯಾಪಾರವನ್ನು ಉತ್ತೇಜಿಸಲು, ರಾಷ್ಟ್ರೀಯ ಭದ್ರತೆ ಮತ್ತು ವಾಣಿಜ್ಯ ಅಗತ್ಯಗಳಿಗಾಗಿ ಭಾರತೀಯ ನಾಗರಿಕರ ಮಾಲೀಕತ್ವದ ಮತ್ತು ನಿರ್ವಹಣೆಯ ಹಡಗುಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು, 'ಕರಾವಳಿ ನೌಕಾಯಾನ ಮಸೂದೆ- 2024' ಈ ಅಧಿವೇಶನಲ್ಲಿ ಮಂಡನೆಯಾಗಲಿದೆ.
ಭಾರತದ ಅಂತರಾಷ್ಟ್ರೀಯ ನಿಯಮ ಮತ್ತು ಶಾಸನಬದ್ಧ ಅನುಸರಣೆಗೆ ಅನುಗುಣವಾಗಿ ಬಂದರುಗಳ ಸಂರಕ್ಷಣೆ, ಭದ್ರತೆ ಮತ್ತು ಬಂದರುಗಳಲ್ಲಿ ಮಾಲಿನ್ಯ ನಿಯಂತ್ರಣವನ್ನು ತಡೆಗಟ್ಟಲು 'ಭಾರತೀಯ ಬಂದರು.ಮಸೂದೆ 2024 ಮಂಡನೆಯಾಗುತ್ತಿರುವ ಮತ್ತೊಂದು ಹೊಸ ಮಸೂದೆ. 'ಮರ್ಚಂಟ್ ಶಿನ್ನಿಂಗ್ ಬಿಲ್ 2020) 'ಪಂಜಾಬ್ ನ್ಯಾಯಾಲಯಗಳ (ತಿದ್ದುಪಡಿ) ಮಸೂದೆ, 'ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಮಸೂದೆ' ಪಟ್ಟಿಯಲ್ಲಿರುವ ಹೊಸ ಮಸೂದೆಗಳು..
ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ- 2024. ಗೋವಾ ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ- 2024 ಮುಸಲ್ಮಾನ್ ವಕ್ಸ್ (ರದ್ದತಿ) ಮಸೂದೆ -2024, ಲಾಡಿಂಗ್ ಪುಸೂದೆ- 2024 ಸಮುದ್ರ ಮೂಲಕ ಸರಕು ಸಾಗಣೆ ಮಸೂದೆ 2024 ರೈಲ್ವೆ (ತಿದ್ದುಪಡಿ) ಮಸೂದೆ- 2024 ಮತ್ತು ಬ್ಯಾಂಕಿಂಗ್ ಕಾನೂನುಗಳು 1ತಿದ್ದು ಪಡಿ) ಮಸೂದೆ 2024 ಇವಿಷ್ಟು | ಉಳಿದಿರುವ ಮಸೂದೆಗಳು
ರಾಜ್ಯಸಭೆಯಲ್ಲಿ ತೈಲ ಕ್ಷೇತ್ರಗಳ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ 2024 ಮತ್ತು ಬಾಯ್ಸರ್‍ಗಳ ಮಸೂದೆ- 2024 ಸೇರಿದಂತೆ ಮೂರು ಮಸೂದೆಗಳು ಬಾಕಿ ಉಳಿದಿವೆ ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ ಭಾರತೀಯ ವಾಯುಯಾನ ಮಸೂದೆ- 2024 ರಾಜ್ಯ ಸಭೆಯಲ್ಲೂ ಬಾಕಿ ಉಳಿದಿದೆ.