HEALTH TIPS

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂದೇ ಬಿಡ್ತು ಈ ಹೊಸ ಫೋನ್‌; 6500 mAh ಬ್ಯಾಟರಿ!

 ನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ಒಂದಾಗಿರುವ ರಿಯಲ್‌ಮಿ ಸಂಸ್ಥೆಯು ತನ್ನ GT ಸರಣಿಯಲ್ಲಿ ಈಗಾಗಲೇ ಕೆಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ ರಿಯಲ್‌ಮಿ ಕಂಪನಿಯು ಇದೀಗ ರಿಯಲ್‌ಮಿ GT 7 ಪ್ರೊ (Realme GT 7 Pro) ಮೊಬೈಲ್‌ ಅನ್ನು ಪರಿಚಯಿಸಿದೆ.

ಈ ಫೋನ್‌ ಇತ್ತೀಚಿನ ಹೊಸ ಸ್ನ್ಯಾಪ್‌ಡ್ರಾಗನ್‌ 8 ಎಲೈಟ್‌ ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯವನ್ನು ಪಡೆದುಕೊಂಡಿದೆ.

ಹೌದು, ರಿಯಲ್‌ಮಿ ಸಂಸ್ಥೆಯು ನೂತನವಾಗಿ ರಿಯಲ್‌ಮಿ GT 7 ಪ್ರೊ (Realme GT 7 Pro) ಅನ್ನು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಅಂದಹಾಗೆ ಈ ಫೋನ್‌ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಕ್ಯಾಮೆರಾ ಹೊಂದಿದ್ದು, ಹಾಗೆಯೇ 6500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಒಳಗೊಂಡಿದೆ. ಅಲ್ಲದೇ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ.

ಅಲ್ಲದೇ ಈ ಫೋನ್‌ 1.5K OLED ಡಿಸ್‌ಪ್ಲೇ ಪಡೆದುಕೊಂಡಿದೆ. ಹಾಗೆಯೇ 12GB + 256GB, 16GB + 256GB, 12GB + 512GB, 16GB + 512GB ಹಾಗೂ 16GB + 1TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ರಿಯಲ್‌ಮಿ GT 7 ಪ್ರೊ (Realme GT 7 Pro) ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ರಿಯಲ್‌ಮಿ GT 7 ಪ್ರೊ ಫೋನ್‌ 6.78 ಇಂಚಿನ 8T LTPO ಸ್ಯಾಮ್‌ಸಂಗ್‌ Eco2 1.5K OLED ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಅಲ್ಲದೇ ಇದರೊಂದಿಗೆ ಡಾಲ್ಬಿ ವಿಷನ್, HDR10+ ಸಪೋರ್ಟ್‌ ಸಹ ಪಡೆದಿದೆ. ಇದು 6000nits HDR ಬ್ರೈಟ್‌ನೆಸ್, 120 ಪ್ರತಿಶತ DCI-P2 ಬಣ್ಣದ ಹರವು, 450 PPI ಸೌಲಭ್ಯ, 2000nits ಬ್ರೈಟ್‌ನೆಸ್ ಹಾಗೂ ಪಂಚ್-ಹೋಲ್ ಕಟೌಟ್ ಆಯ್ಕೆಗಳನ್ನು ಪಡೆದಿದೆ.

ಪ್ರೊಸೆಸರ್ ಪವರ್‌

ರಿಯಲ್‌ಮಿ GT 7 ಪ್ರೊ ಫೋನ್‌ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 8 ಎಲೈಟ್‌ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಕೂಡಾ ಪಡೆದಿದೆ. ಹಾಗೆಯೇ 12GB + 256 GB, 16GB + 256 GB, 12GB + 512 GB, 16GB + 512 GB ಹಾಗೂ 16GB + 1TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಕ್ಯಾಮೆರಾ ಸೆನ್ಸಾರ್‌

ರಿಯಲ್‌ಮಿ GT 7 ಪ್ರೊ ಫೋನ್‌ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಹಾಗೆಯೇ ಎರಡನೇಯ ಹಾಗೂ ಮೂರನೇಯ ಕ್ಯಾಮೆರಾಗಳು ಕ್ರಮವಾಗಿ 50 ಮೆಗಾ ಪಿಕ್ಸಲ್‌ ಹಾಗೂ 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಕಾಣಿಸಿಕೊಂಡಿವೆ. ಇದಲ್ಲದೇ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸಹ ಇದೆ.

ಬ್ಯಾಟರಿ ಬ್ಯಾಕ್‌ಅಪ್‌

ರಿಯಲ್‌ಮಿ GT 7 ಪ್ರೊ ಫೋನ್‌ 6500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 120W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಅಲ್ಲದೇ ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌, IP69+IP68 ರೇಟಿಂಗ್, ಹೈ-ರೆಸ್ ಆಡಿಯೋ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಬೆಲೆ ಎಷ್ಟು

12GB/256GB CNY 3,699 (ಭಾರತದಲ್ಲಿ ಅಂದಾಜು 43,900ರೂ)

16GB/256GB CNY 3,899 (ಭಾರತದಲ್ಲಿ ಅಂದಾಜು 46,200ರೂ)

12GB/512GB CNY 3,999 (ಭಾರತದಲ್ಲಿ ಅಂದಾಜು 47,400ರೂ)

16GB/512GB CNY 4,299 (ಭಾರತದಲ್ಲಿ ಅಂದಾಜು 51,000ರೂ)


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries