HEALTH TIPS

ಕಾಸರಗೋಡು ಜಿಲ್ಲೆಯ ಆರಾಧನಾಲಯ, ವ್ಯಾಪಾರಿ ಸಂಸ್ಥೆ, ಆಸ್ಪತ್ರೆಯಿಂದ ಸರಣಿ ಕಳವು- ಮಾನ್ಯ ಶ್ರಿ ಅಯ್ಯಪ್ಪ ಮಂದಿರದ 6ಲಕ್ಷರೂ. ಮೌಲ್ಯದ ರಜತ ಛಾಯಾಚಿತ್ರ ಹೊತ್ತೊಯ್ದ ಕಳ್ಳರು!

ಕಾಸರಗೋಡು: ಜಿಲ್ಲೆಯ ವಿವಿಧೆಡೆ ಆರಾಧನಾಲಯ, ಆಸ್ಪತ್ರೆ, ವ್ಯಾಪಾರಿ ಸಂಸ್ಥೆಗಳಿಂದ ಸರಣಿ ಕಳವು ನಡೆದಿದ್ದು ಪೊಲೀಸ್ ಇಲಾಖೆಯ ಕಾರ್ಯವೈಖರಿ ಜನರಲ್ಲಿ ಸಂಶಯ ಮೂಡಿಸಿದೆ. ಕಾಸರಗೋಡು, ಮೇಲ್ಪರಂಬ, ವಿದ್ಯಾನಗರ, ಬದಿಯಡ್ಕ, ಮಂಜೇಶ್ವರ ಪೊಲೀಸ್ ಠಾಣೆ ವಯಾಪ್ತಿಯಲ್ಲಿ ಕಳೆದ ಎರಡು ದಿವಸಗಳಿಂದ ಅವ್ಯಾಹತವಾಗಿ ಕರಲವು ನಡೆದಿದೆ.

ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಮಾನ್ಯ ಶ್ರೀ ಅಯ್ಯಪ್ಪ ಭಜನಾಮಂದಿರದ ಬೀಗ ಒಡೆದು ನುಗ್ಗಿದ ಕಳ್ಳರು ಶ್ರೀ ಅಯ್ಯಪ್ಪ ದೇವರ ಬೆಳ್ಳಿಯ ಛಾಯಾಚಿತ್ರ ಹಾಗೂ ಎರಡು ಕಾಣಿಕೆ ಹುಂಡಿಗಳಿಂದ ನಗದು ದೋಚಿದ್ದಾರೆ. ಬೆಳ್ಳಿ ಛಾಯಾಚಿತ್ರದ ಮೌಲ್ಯ ಆರು ಲಕ್ಷ ರೂ. ಹೊಂದಿರುವುದಾಗಿ ಮಂದಿರ ಸಮಿತಿ ಪದಾಧಿಕಾರಿಗಳು ದಊರಿನಲ್ಲಿ ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಬದಿಯಡ್ಕ ಸನಿಹದ ನೆಲ್ಲಿಕಟ್ಟೆ ಶ್ರೀನಾರಾಯಣಗುರು ಮಂದಿರದ ಗರ್ಭಗುಡಿ ಹಾಗೂ ಕಚೇರಿ ಬಾಗಿಲು ಒಡೆದು ನುಗ್ಗಿದ ಕಳ್ಳರು 25ಸಾವಿರ ರೂ. ನಗದು ಹಾಗೂ ಎರಡು ಕಾಣಿಕೆ ಹುಂಡಿಗಳಿಂದ ನಗದು ದೋಚಿದ್ದಾರೆ.  ಮೇಲ್ಪರಂಬ ಪೊಲೀಸ್ ಠಾಣೆ ವಯಾಪ್ತಿಯ ಪೊಯಿನಾಚಿ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ನುಗ್ಗಿದ ಕಳ್ಳರು 8ಗ್ರಾಂ ತೂಕದ ಚಿನ್ನ ಹಾಗೂ ಸಿಸಿ ಕ್ಯಾಮರಾದ ಹಾರ್ಡ್ ಡಿಸ್ಕ್ ಕಳವುಗೈದಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಡನೀರು ವಿಷ್ಣುಮಂಗಲ ದೇವಸ್ಥಾನದ ಬಾಗಿಲು ಒಡೆದು ನುಗ್ಗಿದ ಕಳ್ಳರುಕಾಣಿಕೆ ಹುಡಿಯಲ್ಲಿದ್ದ ಸುಮಾರು ಏಳುವರೆ ಸಾವಿರ ರಊ. ದೋಚಿದ್ದಾರೆ. ಗಣಪತಿ ದೇವರ ಗುಡಿಯ ಬಾಗಿಲು ಒಡೆದ ಸ್ಥಿತಿಯಲ್ಲಿತ್ತು. ಕಪಾಟಿನಲ್ಲಿರಿಸಿದ್ದ ಸಾಮಗ್ರಿ ಚಲ್ಲಾಪಿಲ್ಲಿಗೊಳಿಸಲಾಘಿತ್ತು. ಬೆಳಗ್ಗೆ ಅರ್ಚಕರು ಪೂಜೆಗಾಗಿ ಆಗಮಿಸಿದಾಗ ಕಳವು ಬೆಳಕಿಗೆ ಬಂದಿದ್ದು, ದೇಗುಲ ಸಮಿತಿ ಸಹಾಯಕ ಪ್ರಬಂಧಕ ವೇಣುಗೋಪಾಲ್ ಅವರ ದಊರಿನ ಮೇರೆಗೆ ವಿದ್ಯನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇನ್ಸ್‍ಪೆಕ್ಟರ್ ವಿ.ಪಿ ವಿಪಿನ್ ನೇತೃತ್ವದ ಪೊಲಿಸರ ತಂಡ, ಶ್ವಾನದಳ, ಬೆರಳಚ್ಚು ತಜ್ಞರು ತಪಾಸಣೆ ನಡೆಸಿದರು. ಜಿಲ್ಲೆಯಲ್ಲಿ ವಿವಿಧೆಡೆ ಕಳವು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಪೊಲೀಸರಿಂದ ವಿಶೇಷ ಕೂಂಬಿಂಗ್ ನಡೆಯುತ್ತಿದ್ದಂತೆ ಸರಣಿ ಕಳವು ನಡೆದಿದೆ!

ಕಾಸರಗೋಡು ನಗರದ ಖಾಸಗಿ ಆಸ್ತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿಯ ಮೂರುವರೆ ಪವನಿನ ಚಿನ್ನದ ಸರ ಕಳವುಗೈದಿರುವ ಬಗ್ಗೆ ಕಾಞಂಗಾಡು ಕಾಟ್ಟಾಡಿ ಕೊಳವಯಲ್ ನಿವಾಸಿ ಎಂ.ಕೆ ಖಾಲಿದ್ ಅವರ ದುರಿನ ಮೇರೆಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಜೇಶ್ವರ ಪೊಲಿಸ್ ಠಾಣೆ ವ್ಯಾಪ್ತಿಯ ವರ್ಕಾಡಿಯ ಮುಡಿಪು ರಸ್ತೆಯ ಬಜಿಲಕರಿಯ ಬಾಲಯೇಸು ಪ್ರಾರ್ಥನಾ ಮಂದಿರ, ಪಾವಳದ ಕೊರಗಜ್ಜ ಕಟ್ಟೆಯ ಕಾಣಿಕೆ ಹುಂಡಿ, ಮೂರುಗೋಳಿ ಪಾಡಿ ನಿವಾಸಿ ಬಶೀರ್ ಎಂಬವರ ಜನರಲ್ ಸಟೋರ್‍ನಿಂದ  ಕಳ್ಳರು ಹಣ ದೋಚಿದ್ದಾರೆ. ಬಾಲಯೇಸು ಪ್ರಾರ್ಥನಾಮಂದಿರದ ಎರಡು ಕಾಣಿಕೆ ಹುಮಡಿಯಲ್ಲಿ ಸುಮಾರು ಎರಡು ಸಆವಿರ ರಊ. ಹಾಗೂ ಕೊರಗಜ್ಜ ಕಟ್ಟೆ ಕಾಣಿಕೆಹುಮಡಿಯಿಂದ ಎರಡುಸಾವಿರ ರಊ. ದೋಚಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries