HEALTH TIPS

ಅಸ್ಸಾಂ, ಪಂಜಾಬ್‌, ಮಧ್ಯಪ್ರದೇಶ, ಸಿಕ್ಕಿಂ ಫಲಿತಾಂಶ: ಬಿಜೆಪಿಗೆ 7, ಎಎಪಿಗೆ 3

ನವದೆಹಲಿ: ಅಸ್ಸಾಂ, ಪಂಜಾಬ್‌, ಮಧ್ಯಪ್ರದೇಶ, ಸಿಕ್ಕಿಂ ರಾಜ್ಯಗಳಲ್ಲಿನ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಎಎಪಿ ಪಕ್ಷಗಳು ಜಯ ಸಾಧಿಸಿವೆ.

ಅಸ್ಸಾಂ ರಾಜ್ಯದ 4 ಸ್ಥಾನಗಳ ಪೈಕಿ 2ರಲ್ಲಿ ಬಿಜೆಪಿ, ಒಂದು ಕ್ಷೇತ್ರದಲ್ಲಿ ಅಸ್ಸಾಂ ಗಣ ಪರಿಷತ್‌ ಹಾಗೂ ಮತ್ತೊಂದು ಕ್ಷೇತ್ರದಲ್ಲಿ ಯುಪಿಪಿ ಪಕ್ಷ ಗೆಲುವು ದಾಖಲಿಸಿದೆ.

ಪಂಜಾಬ್‌ ರಾಜ್ಯದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಎಎಪಿ ಮೂರು ಹಾಗೂ ಕಾಂಗ್ರೆಸ್‌ ಪಕ್ಷ ಒಂದು ಸ್ಥಾನದಲ್ಲಿ ಗೆಲುವು ದಾಖಲಿಸಿದೆ. ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ.

ಮಧ್ಯಪ್ರದೇಶದ 2 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಸಿಕ್ಕಿಂನ ಎರಡರಲ್ಲೂ ಎಸ್‌ಕೆಎಂ ಪಕ್ಷ ಜಯ ಸಾಧಿಸಿದೆ.

ಉಳಿದಂತೆ ಗುಜರಾತ್‌, ಛತೀಸ್‌ಗಢ ಉತ್ತರಾಖಂಡ್‌ ರಾಜ್ಯಗಳ ತಲಾ ಒಂದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳನ್ನು ಗೆದ್ದುಕೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries